ಐತಿಹಾಸಿಕ ಮಟ್ಟಕ್ಕೆ ಏರಿಕೆ ಕಂಡ ಚಿನ್ನದ ದರ
ಚಿನಿವಾರ ಪೇಟೆಯಲ್ಲಿ ಚಿನ್ನ ಎಲ್ಲರಿಗೂ ಚೆನ್ನ!
ಹೊಸದಿಲ್ಲಿ: ಭಾರತದಲ್ಲಿ ಚಿನ್ನದ ದರ ಐತಿಹಾಸಿಕ ಮಟ್ಟಕ್ಕೆ ಏರಿಕೆ ಕಂಡಿದ್ದು, ಗುರುವಾರವೂ ಕೂಡಾ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 22 ರೂ.ನಂತೆ ಏರಿಕೆ ಕಂಡು ಪ್ರತಿ ಗ್ರಾಂಗೆ 12,415 ರೂ.ಗೆ ತಲುಪಿತು.
ಇದೇ ರೀತಿ 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 20 ರೂ. ಏರಿಕೆಯಾಗಿ ಪ್ರತಿ ಗ್ರಾಂಗೆ 11,380 ರೂ. ತಲುಪಿದರೆ, 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 16 ರೂ. ಏರಿಕೆ ಕಂಡು, ಪ್ರತಿ ಗ್ರಾಂಗೆ 9,311 ರೂ. ತಲುಪಿತು.
ಅಮೆರಿಕ ಸರಕಾರ ಸ್ಥಗಿತಗೊಳ್ಳುವ ಭೀತಿ, ಭಾರತದಲ್ಲಿನ ಹಬ್ಬದ ಋತುವಿನ ಬೇಡಿಕೆ ಹಾಗೂ ಮಾರುಕಟ್ಟೆಯಲ್ಲಿನ ಏರುಪೇರಿನಿಂದ ಚಿನ್ನದ ದರ, ಅಕ್ಟೋಬರ್ ತಿಂಗಳಲ್ಲಿ ಸ್ಥಿರ ಏರಿಕೆ ಪ್ರವೃತ್ತಿ ಪ್ರದರ್ಶಿಸುತ್ತಿದೆ. ಹೂಡಿಕೆದಾರರ ಸ್ವರ್ಗ ಎಂದೇ ಪರಿಗಣಿಸಲಾಗಿರುವ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನವನ್ನು ಖರೀದಿಸಲು ಹೂಡಿಕೆದಾರರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಅದೇ ರೀತಿ ಆಭರಣಗಳ ತಯಾರಿಕೆಗೆ ಬಳಸಲಾಗುವ 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಪರಿಶುದ್ಧತೆಯ ಚಿನ್ನದ ಬೇಡಿಕೆಯಲ್ಲೂ ಸ್ಥಿರತೆ ಕಂಡು ಬಂದಿದೆ.
ಬುಧವಾರ ಚಿನಿವಾರ ಪೇಟೆಯಲ್ಲಿ ಪ್ರತಿ ಗ್ರಾಂಗೆ 12,393 ರೂ.ನಂತೆ ಮಾರಾಟಗೊಂಡಿದ್ದ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನದ ದರ, ಗುರುವಾರ ಪ್ರತಿ ಗ್ರಾಂಗೆ 22 ರೂ. ಏರಿಕೆಯಾಗಿದ್ದು, ಪ್ರತಿ ಗ್ರಾಂ ಚಿನ್ನದ ದರ 12,415 ರೂ.ಗೆ ತಲುಪಿದೆ. ನಿನ್ನೆ ಪ್ರತಿ ಗ್ರಾಂಗೆ 11,360 ರೂ.ನಂತೆ ಮಾರಾಟಗೊಂಡಿದ್ದ 22 ಕ್ಯಾರೆಟ್ ಚಿನ್ನದ ದರ, ಗುರುವಾರ ಪ್ರತಿ ಗ್ರಾಂಗೆ 20 ರೂ.ನಂತೆ ಏರಿಕೆ ಕಂಡು 11,380 ರೂ. ತಲುಪಿದರೆ, ಬುಧವಾರ ಪ್ರತಿ ಗ್ರಾಂಗೆ 9,295 ರೂ.ನಂತೆ ಮಾರಾಟಗೊಂಡಿದ್ದ 18 ಕ್ಯಾರೆಟ್ ಪರಿಶುದ್ಧತೆಯ ಚಿನ್ನದ ದರ, ಗುರುವಾರ ಪ್ರತಿ ಗ್ರಾಂಗೆ 16 ರೂ.ನಂತೆ ಏರಿಕೆ ಕಂಡು 9,311 ರೂ.ಗೆ ತಲುಪಿದೆ.