ಜಿಎಸ್‌ಟಿ ಹಗರಣ | ಜಾರ್ಖಂಡ್, ಪಶ್ಚಿಮ ಬಂಗಾಳದ 9 ಸ್ಥಳಗಳಲ್ಲಿ ಈಡಿ ದಾಳಿ
Update: 2025-05-08 21:49 IST
ಸಾಂದರ್ಭಿಕ ಚಿತ್ರ | PTI
ರಾಂಚಿ: ವಂಚನೆಯ ಜಿಎಸ್‌ಟಿ ಇನ್ ವಾಯ್ಸ್‌ಗೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳದ 9 ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಿದೆ.
ಜಾರ್ಖಂಡ್‌ನ ಜೆಮ್ಸೆದ್‌ಪುರ, ರಾಂಚಿ ಹಾಗೂ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ರಾಂಚಿಯ ಕಂಕೆ ರಸ್ತೆಯಲ್ಲಿರುವ ಉದ್ಯಮಿ ವಿವೇಕ್ ನರ್ಸಾರಿಯಾ ಅವರ ನಿವಾಸದ ಮೇಲೆ ಕೂಡ ದಾಳಿ ನಡೆಸಲಾಗಿದೆ ಎಂದು ಅದು ತಿಳಿಸಿದೆ.
ಮೂಲತಃ ರಿಯಲ್ ಎಸ್ಟೆಟ್ ಡೆವಲಪ್ಪರ್ ಆಗಿರುವ ವಿವೇಕ್ ರಾಂಚಿ ಹಾಗೂ ಇತರ ಸ್ಥಳಗಳಲ್ಲಿ ಹಲವು ವಿಧದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.