×
Ad

ಗುಜರಾತ್‌ | ಪೊಲೀಸರ ಮೇಲೆ ದಾಳಿ ಪ್ರಕರಣ; ಕಾಂಗ್ರೆಸ್ ಶಾಸಕ ಸಹಿತ 21 ಮಂದಿ ಬಂಧನ

Update: 2024-12-26 19:56 IST

ಕಾಂಗ್ರೆಸ್ ಶಾಸಕ ಕಿರೀಟ್ ಪಟೇಲ್ | PC : X

ಪಾಟಣ್: ಪಾಟಣ್ ಜಿಲ್ಲೆಯಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಡಿಸೆಂಬರ್ 16ರಂದು ನಡೆದ ಪ್ರತಿಭಟನೆ ಸಂದರ್ಭ ಪೊಲೀಸರಿಗೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಗುರುವಾರ ಗುಜರಾತ್‌ನ ಕಾಂಗ್ರೆಸ್ ಶಾಸಕ ಕಿರೀಟ್ ಪಟೇಲ್ ಹಾಗೂ ಇತರ 20 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಟಣ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪಟೇಲ್, ಸಿದ್ಧಾಪುರದ ಮಾಜಿ ಶಾಸಕ ಚಂದನ್‌ಜಿ ಠಾಕೂರ್ ಹಾಗೂ 200 ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎನ್‌ಎಸ್‌ಯು ಸದಸ್ಯರು ಹಾಸ್ಟೆಲ್‌ನಲ್ಲಿ ಮದ್ಯಪಾನದ ಬಗ್ಗೆ ಹೇಮಚಂದ್ರಾಚಾರ್ಯ ನಾರ್ತ್ ಗುಜರಾತ್ ಯುನಿವರ್ಸಿಟಿ (ಎಚ್‌ಎನ್‌ಜಿಯು)ಯಲ್ಲಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಸಂದರ್ಭ ಪೊಲೀಸರಿಗೆ ಹಲ್ಲೆ ನಡೆಸಿದ ಹಾಗೂ ನಿಂದಿಸಿದ ಆರೋಪದಲ್ಲಿ ಮರು ದಿನ ಪಾಟಣ ಬಿ ವಿಭಾಗದ ಪೊಲೀಸರು ಪಟೇಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News