×
Ad

ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ಹರ್ಷಕುಮಾರ್ ಪಟೇಲ್ ಬಂಧನ

Update: 2024-02-26 15:20 IST

ಸಾಂದರ್ಭಿಕ ಚಿತ್ರ (PTI)

ಅಹ್ಮದಾಬಾದ್: ಗುಜರಾತ್‍ನ ದಿಂಗುಚಾ ಮಾನವ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ಹರ್ಷಕುಮಾರ್ ಪಟೇಲ್ ಅಲಿಯಾಸ್ ಡರ್ಟಿ ಹ್ಯಾರಿಯನ್ನು ಅಮೆರಿಕದ ಅಧಿಕಾರಿಗಳು ಚಿಕಾಗೋದಲ್ಲಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 2022ರ ಜನವರಿಯಲ್ಲಿ ಕೆನಡಾದಿಂದ ಅಕ್ರಮವಾಗಿ ಅಮೆರಿಕದ ಗಡಿ ಪ್ರವೇಶಿಸುತ್ತಿದ್ದ ವೇಳೆ ಒಂದೇ ಕುಟುಂಬದ ನಾಲ್ವರು ಮೈಕೊರೆಯುವ ಚಳಿಯಿಂದ ಮೃತಪಟ್ಟಿದ್ದರು.

ಚಿಕಾಗೋ ವಿಮಾನ ನಿಲ್ದಾಣದಲ್ಲಿ ಹರ್ಷಕುಮಾರ್‍ನನ್ನು ಬಂಧಿಸಲಾಗಿದೆ ಎಂದು ಕೆನಡಿಯನ್ ಬ್ರಾಡ್‍ಕಾಸ್ಟ್ ಕಾರ್ಪೊರೇಷನ್ (ಸಿಬಿಸಿ)ಯ ನ್ಯೂಸ್ ಫಿಫ್ತ್ ಎಸ್ಟೇಟ್ ಸೆಗ್‍ಮೆಂಟ್ ವರದಿ ಮಾಡಿದೆ.

ಜಗದೀಶ್ ಪಟೇಲ್ (39), ಪತ್ನಿ ವೈಶಾಲಿ (37), ಪುತ್ರಿ ವಿಹಾಂಗಿ (11) ಮತ್ತು ಮಗ ಧಾರ್ಮಿಕ್ (3) ಅವರ ಧಾರುಣ ಸಾವು ಅಮೆರಿಕ ಹಾಗೂ ಕೆನಡಾದಲ್ಲಿದ್ದ ಗುಜರಾತಿ ಸಮುದಾಯವನ್ನು ಬೆಚ್ಚಿ ಬೀಳಿಸಿತ್ತು. ಈ ಕುಟುಂಬ ಗಾಂಧಿನಗರ ಸಮೀಪದ ದಿಗುಂಚಾದಿಂದ ಆಗಮಿಸಿತ್ತು.

ಈ ಪ್ರಕರಣದಲ್ಲಿ ಹರ್ಷಕುಮಾರ್ ಸ್ಟೀವ್ ಶಂದ್ ಎಂಬಾತನ ಜತ ಸಂಪರ್ಕದಲ್ಲಿದ್ದು, ಈತ ಅಮೆರಿಕದ ಗಡಿಯಲ್ಲಿ ಮೃತಪಟ್ಟ ನಾಲ್ವರು ಸೇರಿದಂತೆ ಏಳು ಮಂದಿ ಗುಜರಾತಿಗಳನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ಆಪಾದಿಸಲಾಗಿತ್ತು. ಅಮೆರಿಕದ ಅಧಿಕಾರಿಗಳು ಈತನ ವ್ಯಾನ್ ಅನ್ನು 2022ರ ಜನವರಿ 19ರಂದು ವಶಪಡಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News