×
Ad

ಗುಜರಾತ್: ಬುಡಕಟ್ಟು ಮಹಿಳೆಯ ತಲೆ ಬೋಳಿಸಿ, ನಗ್ನಗೊಳಿಸಿ ರಸ್ತೆಯಲ್ಲೇ ತ್ಯಜಿಸಿದ ಪ್ರಿಯಕರನ ಹೆತ್ತವರು

Update: 2023-11-26 23:23 IST

Photo: ndiatoday.in

ಅಹ್ಮದಾಬಾದ್: ಗುಜರಾತ್‌ನ ತಾಪಿ ಜಿಲ್ಲೆಯ ವ್ಯಾರಾ ಪಟ್ಟಣದಲ್ಲಿ ವಾಸಿಸುತ್ತಿರುವ ವಿಚ್ಛೇದಿತ ಬುಡಕಟ್ಟು ಮಹಿಳೆಯೋರ್ವರನ್ನು ಆಕೆಯ ಪ್ರಿಯಕರನ ಕುಟುಂಬದವರು ಅಪಹರಿಸಿ, ತಲೆ ಬೋಳಿಸಿ, ಹಲ್ಲೆ ನಡೆಸಿದ್ದಾರೆ ಹಾಗೂ ಅರೆನಗ್ನಗೊಳಿಸಿ ರಸ್ತೆ ಬದಿಯಲ್ಲಿ ತ್ಯಜಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

26 ವರ್ಷದ ಮಹಿಳೆ 8 ವರ್ಷಗಳ ಹಿಂದೆ ವಿಚ್ಛೇದಿತಳಾಗಿದ್ದಳು ಹಾಗೂ ತನ್ನ ಪುತ್ರನೊಂದಿಗೆ ಬದುಕುತ್ತಿದ್ದಳು. ಒಂದೂವರೆ ವರ್ಷಗಳ ಹಿಂದೆ ಆಕೆ ಬೊರಖಾಡಿ ಗ್ರಾಮದ ನಿವಾಸಿಯಾಗಿರುವ ನೀರವ್ ಚೌಧರಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇಬ್ಬರೂ ವ್ಯಾರಾ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ಒಟ್ಟಾಗಿ ಜೀವಿಸಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಚೌಧರಿ ಹೆತ್ತವರು ಹಾಗೂ ಸಂಬಂಧಿಕರು ಈ ಸಂಬಂಧದ ಬಗ್ಗೆ ಹಾಗೂ ಅವರು ಒಟ್ಟಾಗಿ ಜೀವಿಸುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದರು. ಪೊಲೀಸ್ ದೂರಿನ ಪ್ರಕಾರ ಆಕೆ ಬುಧವಾರ ಅಪರಾಹ್ನ ಚೌಧರಿ ಹಾಗೂ ತನ್ನ ಗೆಳತಿ ಪ್ರೀತಿಕಾಬೆನ್‌ನೊಂದಿಗೆ ಕೆಲವು ವೈಯುಕ್ತಿಕ ಕೆಲಸಕ್ಕಾಗಿ ಬುಹಾರಿ ಗ್ರಾಮಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಳು. ಆದರೆ, ಅವರು ಕಪುರಾ ಸ್ಕ್ವಾರ್ ಸಮೀಪದ ಗ್ರಾಮಕ್ಕೆ ತೆರಳುತ್ತಿದ್ದಾಗ ಕಪುರಾ ಸ್ಕ್ವಾರ್ ಸಮೀಪ ಚೌಧರಿಯ ಹೆತ್ತವರಾದ ಸುನಿತಾಬೆನ್, ಅಜಿತ್‌ಭಾ, ಸ್ನೇಹಲ್‌ಭಾ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿ ತಡೆದು ನಿಲ್ಲಿಸಿದ್ದರು. ಅವರೆಲ್ಲರೂ ಮೋಟಾರು ಸೈಕಲ್‌ನಲ್ಲಿ ಆಗಮಿಸಿದ್ದರು.

ಸುನಿತಾಬೆನ್ ಹಾಗೂ ಅಜಿತ್‌ಭಾ ಅಲ್ಲಿಂದ ತಮ್ಮ ಪುತ್ರನನ್ನು ಕರೆದುಕೊಂಡು ತೆರಳಿದರು. ಸ್ನೇಹಲ್‌ಭಾ ಹಾಗೂ ನಾಲ್ಕನೇ ವ್ಯಕ್ತಿ ಮಹಿಳೆಗೆ ತಮ್ಮೊಂದಿಗೆ ಬರುವಂತೆ ತಿಳಿಸಿದರು ಹಾಗೂ ವ್ಯಾರಾದಲ್ಲಿರುವ ಆಕೆಯ ಮನೆಗೆ ಹಿಂದೆ ಕರೆದುಕೊಂಡು ಬಿಡುವುದಾಗಿ ಭರವಸೆ ನೀಡಿದರು. ಆದರೆ, ಇಬ್ಬರೂ ಆಕೆಯನ್ನು ಚೌಧರಿ ಅವರ ಹೆತ್ತವರು ಈಗಾಗಲೇ ಕಾಯುತ್ತಿರುವ ಖುಶಾಲ್‌ಪುರ ಗ್ರಾಮಕ್ಕೆ ಕರೆದೊಯ್ದರು. ಚೌಧರಿ ಹೆತ್ತವರು ಆಕೆಯನ್ನು ಕೂಡಲೇ ಹಿಡಿದುಕೊಂಡರು ಹಾಗೂ ಪೊದೆಯೊಂದಕ್ಕೆ ಎಳೆದೊಯ್ದು ದೊಣ್ಣೆಯಿಂದ ಥಳಿಸಿದರು ಹಾಗೂ ನಿಂದಿಸಿದರು ಎಂದು ಆರೋಪಿಸಲಾಗಿದೆ.

ಇದಲ್ಲದೆ, ಸುನಿತಾಬೆನ್ ಆಕೆಯ ಕೂದಲು ಕತ್ತರಿಸಿದರು, ಧರಿಸಿದ್ದ ಜೀನ್ಸ್ ಕಳಚಿದಳು ಹಾಗೂ ಆಕೆಯನ್ನು ಗ್ರಾಮದ ರಸ್ತೆಯಲ್ಲೇ ಅರೆ ನಗ್ನಗೊಳಿಸಿದಳು. ತನ್ನ ಪುತ್ರನನ್ನು ಭೇಟಿಯಾಗುವುದನ್ನು ಮತ್ತೆ ನೋಡಿದರೆ, ಕೊಂದು ಹಾಕಲಾಗುವುದು ಎಂದು ಬೆದರಿಕೆ ಕೂಡ ಒಡ್ಡಿದಳು. ಸಂತ್ರಸ್ತೆ ಮಹಿಳೆ ತನ್ನ ಸಂಕಷ್ಟವನ್ನು ಹೆತ್ತವರಲ್ಲಿ ತೋಡಿಕೊಂಡಿದ್ದಾಳೆ ಹಾಗೂ ತಾನಿರುವ ಸ್ಥಳವನ್ನು ಮೊಬೈಲ್ ಮೂಲಕ ಹೆತ್ತವರಿಗೆ ಕಳುಹಿಸಿದ್ದಾಳೆ. ಅನಂತರ ಹೆತ್ತವರು ಆಕೆಯನ್ನು ರಕ್ಷಿಸಿದ್ದಾರೆ.

ಸಂತ್ರಸ್ತೆ ಅನಂತರ ವ್ಯಾರಾ ಪೊಲೀಸ್ ಠಾಣೆ ಸಂಪರ್ಕಿಸಿದ್ದಾರೆ ಹಾಗೂ ಚೌಧರಿಯ ಹೆತ್ತವರಾದ ಸುನಿತಾಬೆನ್, ಅಜಿತ್‌ಭಾ, ಸ್ನೇಹಲ್‌ಭಾ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News