×
Ad

ಗುಜರಾತ್ | ʼದೇಶವನ್ನು ಸಂವಿಧಾನದ ಪ್ರಕಾರ ನಡೆಸಲಾಗುತ್ತಿಲ್ಲʼ ಎಂದು ಬಿಜೆಪಿಗೆ ರಾಜೀನಾಮೆ ನೀಡಿದ ಬುಡಕಟ್ಟು ನಾಯಕ

Update: 2025-04-15 13:51 IST

ಮಹೇಶ್ ವಾಸವ (Photo credit: Facebook)

ಹೊಸದಿಲ್ಲಿ: ಗುಜರಾತ್‌ನ ದೇದಿಯಪದ ಕ್ಷೇತ್ರದ ಮಾಜಿ ಶಾಸಕ, ಬುಡಕಟ್ಟು ನಾಯಕ ಮಹೇಶ್ ವಾಸವ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ದೇಶವನ್ನು ಸಂವಿಧಾನದ ಪ್ರಕಾರ ನಡೆಸಲಾಗುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರಭಾವಿ ಬುಡಕಟ್ಟು ನಾಯಕ ಛೋಟು ವಾಸವ ಅವರ ಪುತ್ರರಾಗಿರುವ ಮಹೇಶ್ ವಾಸವ ಅಂಬೇಡ್ಕರ್ ಜಯಂತಿ ದಿನವೇ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಹೇಶ್ ವಾಸವ ಮಾರ್ಚ್ 2024 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ದೇಶವು ಸಂವಿಧಾನದ ಪ್ರಕಾರ ನಡೆಯುತ್ತಿಲ್ಲ ಎಂದು ನಾನು ಹೇಳಲೇಬೇಕು. ಆದಿವಾಸಿಗಳು, ದಲಿತರು, ಒಬಿಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಇತರ ಬಡ ವರ್ಗಗಳು ಒಂದಾಗಿ ಆರೆಸ್ಸೆಸ್ ಮತ್ತು ಬಿಜೆಪಿಯ ಸಿದ್ಧಾಂತದ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News