×
Ad

ಉತ್ತರಾಖಂಡ| ನಾಲೆಗೆ ಬಿದ್ದ ಕಾರು; ನಾಲ್ವರ ಮೃತ್ಯು, ಮೂವರಿಗೆ ಗಾಯ

Update: 2025-06-25 11:13 IST

Screengrab: X/@PTI_News

ಹಲ್ದ್ವಾನಿ: ಉತ್ತರಾಖಂಡದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲ್ದ್ವಾನಿಯ ರಸ್ತೆಯೊಂದು ಜಲಾವೃತವಾದ ಪರಿಣಾಮ, ಏಳು ಮಂದಿಯನ್ನು ಕರೆದೊಯ್ಯುತ್ತಿದ್ದ ಕಾರೊಂದು ನಾಲೆಗೆ ಉರುಳಿ ಬಿದ್ದು ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ಈ ಘಟನೆಯಲ್ಲಿ ಇಬ್ಬರು ಮಹಿಳೆಯರು, ಓರ್ವ ಪುರುಷ ಹಾಗೂ ನಾಲ್ಕು ದಿನಗಳ ಒಂದು ಹಸುಗೂಸು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಉಳಿದ ಮೂವರನ್ನು ರಕ್ಷಣಾ ತಂಡಗಳು ರಕ್ಷಿಸಿದ್ದು, ಅವರನ್ನೆಲ್ಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News