ಗಾಯದ ಸಮಸ್ಯೆಯಿಂದ ಮುಂದಿನ ಐಪಿಎಲ್ ಗೆ ಹಾರ್ದಿಕ್ ಪಾಂಡ್ಯ ಅಲಭ್ಯ?
Update: 2023-12-23 16:08 IST
Photo: twitter.com/hardikpandya7
ಮುಂಬೈ: ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ನಾಯಕನಾಗಿ ಇತ್ತೀಚೆಗಷ್ಟೇ ಘೋಷಿಸಲ್ಪಟ್ಟಿದ್ದ ಹಾರ್ದಿಕ್ ಪಾಂಡ್ಯ ಅವರು ಪಾದದ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಐಪಿಎಲ್ ಋತುವಿನಿಂದ ಹೊರಗುಳಿಯಬೇಕಾದೀತು ಎಂದು ತಿಳಿದು ಬಂದಿದೆ.
ಐಪಿಎಲ್ ಆಟಗಾರರ ಹರಾಜಿಗಿಂತ ಮುನ್ನವೇ ಗುಜರಾತ್ ಟೈಟನ್ಸ್ ತಂಡದಿಂದ ಅವರನ್ನು ಪಡೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ, ಪಾಂಡ್ಯ ಅವರನ್ನು ತಂಡದ ನಾಯಕನೆಂದು ಘೋಷಿಸುವ ಮೂಲಕ ರೋಹಿತ್ ಶರ್ಮಾ ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರ ಕೈಗೊಂಡಿತ್ತು.
ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯಾವಳಿಯ ವೇಳೆ ಹಾರ್ದಿಕ್ ಅವರ ಪಾದಕ್ಕೆ ಗಾಯವಾಗಿತ್ತು.