ಹರ್ಯಾಣ ವಿಧಾನಸಭೆ: ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಸೈನಿ, ಐವರು ಜೆಜೆಪಿ ಶಾಸಕರಿಂದ ಸಭಾತ್ಯಾಗ
Update: 2024-03-13 14:21 IST
ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ
ಚಂಡೀಗಢ: ಪ್ರಮಾಣ ವಚನ ಸ್ವೀಕರಿಸಿದ ಮರು ದಿನವಾದ ಇಂದು ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿಶ್ವಾಸ ಮತ ನಿರ್ಣಯ ಮಂಡಿಸಿದ್ದಾರೆ. ಈ ನಿರ್ಣಯ ಕುರಿತ ಚರ್ಚೆಗೆ ವಿಧಾನಸಭಾಧ್ಯಕ್ಷರು ಎರಡು ಗಂಟೆಗಳ ಅವಧಿಯನ್ನು ನಿಗದಿಗೊಳಿಸಿದ್ದಾರೆ.
ವಿಶ್ವಾಸ ಮತ ನಿರ್ಣಯವನ್ನು ಚರ್ಚೆಗೆ ತೆಗೆದುಕೊಂಡ ಬೆನ್ನಿಗೇ ಜನನಾಯಕ್ ಜನತಾ ಪಾರ್ಟಿ(ಜೆಜೆಪಿ)ಯ ಶಾಸಕರಾದ ದೇವೇಂದರ್ ಸಿಂಗ್ ಬಬ್ಲಿ, ರಾಮ್ ಕುಮಾರ್ ಗೌತಮ್ ಈಶ್ವರ್ ಸಿಂಗ್, ರಾಮ್ ನಿವಾಸ್ ಹಾಗೂ ಜೋಗಿ ರಾಮ್ ಸಿಹಾಗ್ ವಿಧಾನಸಭೆಯಿಂದ ಸಭಾತ್ಯಾಗ ಮಾಡಿದರು.
ಇದಕ್ಕೂ ಮುನ್ನ, ಇಂದು ಬೆಳಗ್ಗೆ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿಶ್ವಾಸ ಮತ ನಿರ್ಣಯವನ್ನು ಮಂಡಿಸುವಾಗ ತನ್ನ ಎಲ್ಲ ಹತ್ತು ಮಂದಿ ಶಾಸಕರೂ ವಿಧಾನಸಭಾ ಕಲಾಪಕ್ಕೆ ಗೈರಾಗುವಂತೆ ಜನನಾಯಕ್ ಜನತಾ ಪಕ್ಷವು ವಿಪ್ ಜಾರಿಗೊಳಿಸಿತ್ತು.
ಮಾಜಿ ರಾಜ್ಯ ಗೃಹ ಸಚಿವ ಅನಿಲ್ ವಿಜ್ ಸದನದಲ್ಲಿ ಹಾಜರಿದ್ದರು.