×
Ad

ಹರ್ಯಾಣ ವಿಧಾನಸಭಾ ಚುನಾವಣೆ | ಹೂಡಾ, ಫೋಗಟ್, ಇತರರಿಂದ ನಾಮಪತ್ರಗಳ ಸಲ್ಲಿಕೆ

Update: 2024-09-11 20:36 IST

ವಿನೇಶ ಫೋಗಟ್ | PC : PTI 

ಚಂಡಿಗಡ : ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರು ಬುಧವಾರ ತನ್ನ ಸಾಂಪ್ರದಾಯಿಕ ಭದ್ರಕೋಟೆ ರೋಹ್ಟಕ್‌ನ ಗಡಿ ಸಾಂಪಲಾ ಕಿಲೋಯಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

‘ಮಾಡು ಇಲ್ಲವೇ ಮಡಿ’ ಹೋರಾಟದಲ್ಲಿ ಬಿಜೆಪಿಯ ಪದಚ್ಯುತಿಗಾಗಿ ಜನತೆಯ ಬೆಂಬಲವನ್ನು ಅವರು ಕೋರಿದರು.

ಕಾಂಗ್ರೆಸ್‌ನ ಇನ್ನೋರ್ವ ಅಭ್ಯರ್ಥಿ ಹಾಗೂ ಖ್ಯಾತ ಕುಸ್ತಿಪಟು ವಿನೇಶ ಫೋಗಟ್ ಅವರು ಜುಲಾನಾ ಕ್ಷೇತ್ರದಿಂದ ತನ್ನ ನಾಮಪತ್ರ ಸಲ್ಲಿಸಿದರು.

ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ವಿಧಾನಸಭಾ ಸ್ಪೀಕರ್ ಜ್ಞಾನಚಂದ ಗುಪ್ತಾ, ರಾಜ್ಯದ ಮಾಜಿ ಗೃಹಸಚಿವ ಅನಿಲ ವಿಝ್, ಬಿಜೆಪಿ ನಾಯಕ ಒ.ಪಿ.ಧನ್ಕರ್, ಕಾಂಗ್ರೆಸ್‌ನ ಬೃಜೇಂದ್ರ ಸಿಂಗ್ ಮತ್ತು ಆಪ್‌ನ ಅನುರಾಗ ಧಂಡಾ ಅವರೂ ಸೇರಿದ್ದಾರೆ.

ಗುರುವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಗೆ ಮತದಾನ ಅ.5ರಂದು ನಡೆಯಲಿದ್ದು, ಅ.8ರಂದು ಮತಗಳ ಎಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News