×
Ad

ಪಂಜಾಬ್‌ನೊಳಗೆ ನುಸುಳಿ ಹರ್ಯಾಣ ಪೊಲೀಸರಿಂದ ಅಶ್ರುವಾಯು ಶೆಲ್ ದಾಳಿ: ಪ್ರತಿಭಟನಾ ನಿರತ ರೈತರ ಆರೋಪ

Update: 2024-02-22 11:48 IST

Photo: PTI

ಪಾಟಿಯಾಲ/ಅಂಬಾಲ/ಜಿಂದ್: ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತರು ದಿಲ್ಲಿ ಚಲೊ ಮೆರವಣಿಗೆಯನ್ನು ಬುಧವಾರ ಮತ್ತೆ ಪ್ರಾರಂಭಿಸಿದ್ದು, ರೈತರನ್ನು ರಾಷ್ಟ್ರ ರಾಜಧಾನಿಯತ್ತ ತೆರಳಲು ಅವಕಾಶ ನೀಡದಿರಲು ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗಿಸಿದ್ದಾರೆ.

ಖನೌರಿ ಗಡಿ ಬಳಿ ಪಂಜಾಬ್ ಗಡಿಯೊಳಕ್ಕೆ ನುಸುಳಿದ ಹರ್ಯಾಣ ಪೊಲೀಸರು ಅಶ್ರುವಾಯು ಶೆಲ್ ದಾಳಿ ನಡೆಸಿದ್ದರಿಂದ ಸುಮಾರು 50 ರೈತರು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. 

ನಂತರ, ಪಂಜಾಬ್ ಗಡಿ ಬಳಿ ನಿರ್ಮಿಸಲಾಗಿದ್ದ ತಡೆಗೋಡೆಗಳನ್ನು ದಾಟಿ ಬಂದಿರುವ ಪೊಲೀಸರು ಹಾಗೂ ಕೇಂದ್ರ ಮೀಸಲು ಪಡೆಯ ಪೊಲೀಸರು, ರೈತರು ನಿಲ್ಲಿಸಿದ್ದ ವಾಹನಗಳಿಗೆ ಹಾನಿಯೆಸಗಿದ್ದಾರೆ ಎಂದು ಆರೋಪಿಸಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News