×
Ad

ಶಂಭು, ಖನೌರಿ ರಸ್ತೆಯ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ ಹರ್ಯಾಣ ಭದ್ರತಾ ಸಿಬ್ಬಂದಿ

Update: 2025-03-20 20:32 IST

PC ; PTI 

ಚಂಡಿಗಢ: ಶಂಭು ಹಾಗೂ ಖನೌರಿ ಗಡಿ ಕೇಂದ್ರಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ತೆರವುಗೊಳಿಸಿದ ಬಳಿಕ ಹರ್ಯಾಣ ಭದ್ರತಾ ಸಿಬ್ಬಂದಿ ಪಂಜಾಬ್ ರೈತರು ದಿಲ್ಲಿಯತ್ತ ರ್ಯಾಲಿ ನಡೆಸುವುದನ್ನು ತಡೆಯಲು ಅಳವಡಿಸಲಾಗಿದ್ದ ಸಿಮೆಂಟ್ ತಡೆಗೋಡೆಗಳನ್ನು ಗುರುವಾರ ತೆರವುಗೊಳಿಸಲು ಆರಂಭಿಸಿದ್ದಾರೆ.

ಪ್ರತಿಭಟನೆ ನಿರತ ರೈತರು ತಂಗಿದ ಬಳಿಕ ಒಂದು ವರ್ಷಗಳಿಂದ ಮುಚ್ಚಿದ್ದ ಶಂಭು-ಅಂಬಾಲಾ ಹಾಗೂ ಸಂಗ್ರೂರು-ಜಿಂದ್ ರಸ್ತೆಗಳಲ್ಲಿ ಸಂಚಾರ ಮುಕ್ತಗೊಳಿಸಲು ಕಾಂಕ್ರಿಟ್ ಬ್ಲಾಕ್‌ಗಳನ್ನು ತೆರವುಗೊಳಿಸಲು ಶಂಭು ಹಾಗೂ ಖನೌರಿ ಗಡಿಗಳಲ್ಲಿ ಜೆಸಿಬಿ ಹಾಗೂ ಇತರ ಯಂತ್ರಗಳನ್ನು ನಿಯೋಜಿಸಲಾಗಿದೆ.

‘‘ದಿಲ್ಲಿ ಚಲೋ’’ದ ಭಾಗವಾಗಿ ದೇಶದ ರಾಜಧಾನಿಯತ್ತ ರೈತರು ರ್ಯಾಲಿ ನಡೆಸುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಸಿಮೆಂಟ್ ಬ್ಲಾಕ್, ಕಬ್ಬಿಣದ ಮೊಳೆ ಹಾಗೂ ತಂತಿ ಬೇಲಿಯನ್ನು ಅಳವಡಿಸುವ ಮೂಲಕ ಪಂಜಾಬ್‌ನೊಂದಿಗಿನ ರಾಜ್ಯದ ಗಡಿಯನ್ನು ಹರ್ಯಾಣ ಭದ್ರತಾ ಅಧಿಕಾರಿಗಳು ಬಲಿಷ್ಠಗೊಳಿಸಿದ್ದರು’’

ರಸ್ತೆಗಳನ್ನು ಸಂಚಾರ ಮುಕ್ತಗೊಳಿಸಲು ಶಂಭು ಹಾಗೂ ಖನೌರಿ ಗಡಿ ಕೇಂದ್ರಗಳಲ್ಲಿ ಪಂಜಾಬ್ ಭಾಗದಲ್ಲಿ ಉಳಿದಿರುವ ತಾತ್ಕಾಲಿಕ ನಿರ್ಮಾಣಗಳನ್ನು ನೆಲಸಮಗೊಳಿಸಲು ಪಂಜಾಬ್ ಪೊಲೀಸರು ಕೂಡ ಕಾರ್ಯಾಚರಣೆ ಆರಂಭಿಸಿದ್ದಾರೆ.

ಶಂಭು ಗಡಿಯ ರಸ್ತೆಯಲ್ಲಿರುವ ಎಲ್ಲಾ ಟ್ರಾಲಿ ಹಾಗೂ ತಾತ್ಕಾಲಿಕ ರಚನೆಗಳನ್ನು ತೆರವುಗೊಳಿಸಲಾಗುವುದು ಎಂದು ಪಾಟಿಯಾಲದ ಹಿರಿಯೊ ಪೊಲೀಸ್ ಅಧೀಕ್ಷಕ ನಾನಕ್ ಸಿಂಗ್ ತಿಳಿಸಿದ್ದಾರೆ.

ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಹರ್ಯಾಣದ ಅಧಿಕಾರಿಗಳು ಕೂಡ ಇದೇ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಪಂಜಾಬ್ ಪೊಲೀಸರ ಕ್ರಮದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಗುರುವಾರ ಘೋಷಿಸಿದೆ.

ಬುಧವಾರ ಪ್ರತಿಭಟನಕಾರರನ್ನು ತೆರವುಗೊಳಿಸಿರುವುದು ಹಾಗೂ ರೈತ ನಾಯಕರನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ಪಂಜಾಬ್‌ನ ಆಮ್ ಆದ್ಮಿ ಪಕ್ಷ (ಎಎಪಿ)ವನ್ನು ಎಸ್‌ಕೆಎಂ ಹಾಗೂ ಕೆಎಂಎಂ ತರಾಟೆಗೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News