×
Ad

‘ಟ್ಯಾಂಕರ್ ಮಾಫಿಯಾ’ ವಿರುದ್ಧ ಕ್ರಮ ಕೈಗೊಂಡಿದ್ದೀರಾ? : ದಿಲ್ಲಿ ಸರಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

Update: 2024-06-12 21:36 IST

PC : PTI 

ಹೊಸದಿಲ್ಲಿ : ನೀರಿನ ಬಿಕ್ಕಟ್ಟಿನ ನಡುವೆ ನಗರದಲ್ಲಿ ‘ಟ್ಯಾಂಕರ್ ಮಾಫಿಯಾ’ದ ವಿರುದ್ಧ ಯಾವುದಾದರೂ ಕ್ರಮಗಳನ್ನು ತೆಗೆದುಕೊಂಡಿದ್ದೀರಾ? ಎಂದು ಸುಪ್ರೀಂ ಕೋರ್ಟ್ ದಿಲ್ಲಿ ಸರಕಾರವನ್ನು ಬುಧವಾರ ಪ್ರಶ್ನಿಸಿದೆ.

ನೀರು ಪೋಲಾಗುವುದನ್ನು ತಡೆಯಲು ಕೈಗೊಂಡ ಕ್ರಮಗಳ ಕುರಿತು ಅಫಿಡಾವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ದಿಲ್ಲಿ ಸರಕಾರಕ್ಕೆ ಸೂಚಿಸಿದೆ. ಅಲ್ಲದೆ, ವಿಚಾರಣೆಗೆ ಮುನ್ನ ಗುರುವಾರದ ಒಳಗೆ ಅಫಿಡಾವಿಟ್ ಸಲ್ಲಿಸಬಹುದು ಎಂದು ಅದು ಹೇಳಿದೆ.

‘ಟ್ಯಾಂಕರ್ ಮಾಫಿಯಾ’ದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಿಲ್ಲಿ ಪೊಲೀಸರಿಗೆ ತಿಳಿಸುವುದಾಗಿ ಸುಪ್ರೀಂ ಕೋರ್ಟ್ ದಿಲ್ಲಿ ಸರಕಾರಕ್ಕೆ ಹೇಳಿತು.

ಅನಂತರ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News