×
Ad

ಭಾರತದ ಆರ್ಥಿಕತೆ ಕುರಿತ ಟ್ರಂಪ್‌ ಹೇಳಿಕೆಗೆ ರಾಹುಲ್ ಗಾಂಧಿ ಬೆಂಬಲ | ʼಅವರಿಗೆ ಅವರದ್ದೇ ಆದ ಕಾರಣಗಳಿವೆʼ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ ಶಶಿ ತರೂರ್

Update: 2025-08-03 13:32 IST

ಶಶಿ ತರೂರ್ (Photo: PTI)

ಹೊಸದಿಲ್ಲಿ: ಭಾರತದ ಆರ್ಥಿಕತೆ ಸತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ರಾಹುಲ್ ಗಾಂಧಿ ಬೆಂಬಲಿಸಿರುವ ಬಗ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರಾಕರಿಸಿದರು. ಆ ರೀತಿ ಹೇಳಲು ರಾಹುಲ್ ಗಾಂಧಿಗೆ ಸ್ವಂತ ಕಾರಣಗಳು ಇರಬಹುದು. ಅಮೆರಿಕದೊಂದಿಗೆ ಆರ್ಥಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಭಾರತಕ್ಕೆ ಅತ್ಯಗತ್ಯ ಎಂದು ಹೇಳಿದರು.

ರಾಹುಲ್ ಗಾಂಧಿಯ ಹೇಳಿಕೆಯ ಬಗ್ಗೆ ಶಶಿ ತರೂರ್ ಬಳಿ ಕೇಳಿದಾಗ, ನನ್ನ ಪಕ್ಷದ ನಾಯಕರು ಏನು ಹೇಳಿದ್ದಾರೆ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆ ರೀತಿ ಹೇಳಲು ಅವರಿಗೆ ಅವರದ್ದೇ ಆದ ಕಾರಣಗಳಿವೆ. ಅಮೆರಿಕದೊಂದಿಗೆ ಆರ್ಥಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಭಾರತಕ್ಕೆ ಮುಖ್ಯವಾಗಿದೆ. ನಾವು ಅಮೆರಿಕಕ್ಕೆ ಸುಮಾರು 90 ಶತಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡುತ್ತಿದ್ದೇವೆ. ನಾವು ಅದನ್ನು ಕಳೆದುಕೊಳ್ಳುವ ಅಥವಾ ಅದನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತಕ್ಕೆ ಸರಕುಗಳನ್ನು ರಫ್ತು ಮಾಡುವಂತೆ ನಾವು ಇತರ ದೇಶಗಳ ಜೊತೆ ಮಾತುಕತೆ ನಡೆಸಬೇಕು. ನಮ್ಮ ಸರಕುಗಳನ್ನು ಇತರ ದೇಶಗಳಿಗೆ ರಪ್ತು ಮಾಡಬೇಕು. ಆಗ ನಾವು ಅಮೆರಿಕದಲ್ಲಿ ಸಂಭವಿಸಿದ ನಷ್ಟವನ್ನು ಸರಿದೂಗಿಸಬಹುದು. ನಾವು ನಮ್ಮ ಸಮಾಲೋಚಕರನ್ನು ಬೆಂಬಲಿಸಬೇಕು ಎಂದು ಶಶಿತರೂರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News