×
Ad

ಕೇರಳದಲ್ಲಿ ಭಾರೀ ಮಳೆ ಮುಂದುವರಿಕೆ

Update: 2023-11-05 21:25 IST

Photo- PTI

ತಿರುವನಂತಪುರ : ಕೇರಳದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ರಾಜ್ಯದ ಮೂರು ಜಿಲ್ಲೆಗಳಲ್ಲಿ ರವಿವಾರ ಆರೆಂಜ್ ಆಲರ್ಟ್ ಘೋಷಿಸಿದೆ.

ಪತ್ತನಂತಿಟ್ಟ, ಇಡುಕ್ಕಿ ಹಾಗೂ ಮಲಪ್ಪುರಂ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಜಾರಿಗೊಳಿಸಿದೆ. ಅಲ್ಪಪ್ಪುಳ,ಎರ್ನಾಕುಳಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳಿಗೆ ಅದು ಯೆಲ್ಲೋ ಆಲರ್ಟ್ ಅನ್ನು ಘೋಷಿಸಿದೆ.

12ರಿಂದ 20 ಸೆಂ.ಮೀ.ವರೆಗಿನ ಭಾರೀ ಮಳೆಯಾಗುವ ಸ್ಥಳಗಳಲ್ಲಿ ಆರೆಂಜ್ ಆಲರ್ಟ್ ಹಾಗೂ 6 ರಿಂದ 11 ಸೆಂ.ಮೀ. ವರೆಗಿನ ಮಳೆಯಾಗುವ ಸ್ಥಳಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗುತ್ತದೆ.

ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಇಡುಕ್ಕಿ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಸಾಧಾರಣಾ ಮಳೆಯಾಗಲಿದೆ ಮತ್ತು ಒಂದೆರಡು ಸ್ಥಳಗಳಲ್ಲಿ ಭಾರೀ ಗಾಳಿ ಬೀಸಲಿದೆ. ಕೇರಳದ ಇತರ ಜಿಲ್ಲೆಗಳ ಕೆಲವೆಡೆ ಲಘುವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News