×
Ad

ಕೇದಾರನಾಥ| ವಾಯುಪಡೆಯ ಮೂಲಕ ಏರ್ ಲಿಫ್ಟ್ ಮಾಡುವಾಗ ಹಗ್ಗ ತುಂಡು; ಹೆಲಿಕಾಪ್ಟರ್ ಪತನ

Update: 2024-08-31 11:00 IST
Photo: NDTV

ಹೊಸದಿಲ್ಲಿ: ಉತ್ತರಾಖಂಡದ ಕೇದಾರನಾಥದಿಂದ ಗೌಚಾರ್‌ಗೆ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ ಸಾಗಿಸುತ್ತಿದ್ದ ದೋಷಪೂರಿತ ಹೆಲಿಕಾಪ್ಟರ್ ಶನಿವಾರ ಬೆಳಗ್ಗೆ ಟೋಯಿಂಗ್ ಹಗ್ಗ ತುಂಡಾಗಿದ್ದರಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಪತನವಾಗಿದೆ ಎಂದು NDTV ವರದಿ ಮಾಡಿದೆ.

ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ಲಿಂಚೋಲಿಯ ಮಂದಾಕಿನಿ ನದಿಯ ಬಳಿ ಪತನಗೊಂಡಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

“ ಕೇದಾರನಾಥ ಹೆಲಿಪ್ಯಾಡ್‌ನಿಂದ ಗೋಚಾರ್ ಹೆಲಿಪ್ಯಾಡ್‌ಗೆ ಮತ್ತೊಂದು ಹೆಲಿಕಾಪ್ಟರ್ ಮೂಲಕ ತೆಗೆದುಕೊಂಡು ಹೋಗುತ್ತಿದ್ದ ಖಾಸಗಿ ಕಂಪನಿಯೊಂದರ ದೋಷಯುಕ್ತ ಹೆಲಿಕಾಪ್ಟರ್ ಸಮೀಪದ ಲಿಂಚೋಲಿಯಲ್ಲಿ ನದಿಗೆ ಬಿದ್ದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ರಕ್ಷಣಾ ತಂಡವು ಲಿಂಚೋಲಿಯಲ್ಲಿ ಪೊಲೀಸರ ಮೂಲಕ ಮಾಹಿತಿ ಪಡೆಯಿತು. ಎಸ್‌ಡಿಆರ್‌ಎಫ್ ತಂಡವು ಘಟನಾ ಸ್ಥಳಕ್ಕೆ ತಲುಪಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ" ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

ಈ ಹೆಲಿಕಾಪ್ಟರ್ ಈ ಹಿಂದೆ ಕೇದಾರನಾಥ ದೇಗುಲಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News