×
Ad

ರಶ್ಯ: ಮೂವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ

Update: 2024-09-17 12:36 IST

ಸಾಂದರ್ಭಿಕ ಚಿತ್ರ (PTI)

ಮಾಸ್ಕೊ: ಸೋಮವಾರ ಮೂವರನ್ನು ಕರೆದೊಯ್ಯುತ್ತಿದ್ದ ರಶ್ಯ ಚಿನ್ನದ ಗಣಿಗಾರಿಕೆ ಕಂಪನಿಯೊಂದರ ಹೆಲಿಕಾಪ್ಟರ್ ಅಮುರ್ ಪ್ರಾಂತ್ಯದಲ್ಲಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.

ಖೇರ್ಗು ಚಿನ್ನದ ಗಣಿಗಾರಿಕೆ ಕಂಪನಿಗೆ ಸೇರಿದ ರಾಬಿನ್ಸನ್ ಆರ್66 ಹೆಲಿಕಾಪ್ಟರ್, ಪೂರ್ವ ರಶ್ಯದ ಅಮುರ್ ಪ್ರಾಂತ್ಯದಲ್ಲಿ ಅನಧಿಕೃತ ಹಾರಾಟ ನಡೆಸುತ್ತಿತ್ತು ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ನಾಪತ್ತೆಯಾಗಿರುವ ಹೆಲಿಕಾಪ್ಟರ್ ಶೋಧನೆಗೆ 20ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು RIA ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೆಲಿಕಾಪ್ಟರ್ ಜೌಗು ಪ್ರದೇಶದಲ್ಲಿ ನಾಪತ್ತೆಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ಹೇಳಲಾಗಿದೆ.

ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಕುರಿತು ಇದುವರೆಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು Interfax ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News