×
Ad

ಮುಂಬೈಯಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಶಿಂದೆ ಬಣದ ಶಿವಸೇನೆ ನಾಯಕನ ಬಂಧನ

Update: 2024-07-08 17:12 IST

PC : PTI 

ಮುಂಬೈ: ಮುಂಬೈನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದ ಏಕನಾಥ ಶಿಂದೆ ಬಣದ ಶಿವಸೇನೆ ನಾಯಕನ ಪುತ್ರನ ಪ್ರಕರಣದಲ್ಲಿ ಪೊಲೀಸರು ಆರೋಪಿಯ ತಂದೆಯನ್ನು ಬಂಧಿಸಿದ್ದಾರೆ. ಈ ಅಪಘಾತದಲ್ಲಿ 45 ವರ್ಷದ ಓರ್ವ ಮಹಿಳೆ ಮೃತಪಟ್ಟು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದರು.

ರವಿವಾರ ಮುಂಜಾನೆ ತಮ್ಮ ಪತಿ ಪ್ರದೀಪ್ ನಖ್ವಾರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವರ್ಲಿ ಕೋಳಿವಾಡದ ನಿವಾಸಿ ಕಾವೇರಿ ನಖ್ವಾ ಎಂಬ ಮಹಿಳೆಗೆ ಮಿಹಿರ್ ಶಾ (24) ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು ಎಂದು ಆರೋಪಿಸಲಾಗಿದೆ.

ಈ ಸಂಬಂಧ ಮಿಹಿರ್ ಶಾನ ತಂದೆಯಾದ ರಾಜೇಶ್ ಶಾರನ್ನು ತಮ್ಮ ಪುತ್ರನಿಗೆ ಪರಾರಿಯಾಗಲು ಸಹಕರಿಸಿದ ಆರೋಪದಡಿ ಬಂಧಿಸಲಾಗಿದೆ.

ರಾಜೇಶ್ ಶಾ ಪಾಲ್ಘರ್ ಜಿಲ್ಲೆಯ ಏಕನಾಥ್ ಶಿಂದೆ ಬಣದ ಶಿವಸೇನೆಯ ನಾಯಕರಾಗಿದ್ದು, ಸದ್ಯ ಪಾಲ್ಘರ್ ಜಿಲ್ಲೆಯಲ್ಲಿ ಪಕ್ಷದ ಉಪ ನಾಯಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News