×
Ad

ಕೋಲ್ಕತ್ತಾಗೆ ಬಂದಿಳಿದ ಬೃಹತ್ ಗಾತ್ರದ ಏರ್ ಬಸ್ ಬೆಲುಗ ವಿಮಾನ

Update: 2024-10-09 19:02 IST

PC : PTi

ಕೋಲ್ಕತ್ತಾ: ಇದೇ ಪ್ರಪ್ರಥಮ ಬಾರಿಗೆ ಕೋಲ್ಕತ್ತಾ ವಿಮಾನ ನಿಲ್ದಾಣವು ಬೃಹತ್ ಗಾತ್ರದ ಏರ್ ಬಸ್ ಬೆಲುಗ ಸರಣಿಯ ಬೆಲುಗ ಎಕ್ಸ್ ಎಲ್ ವಿಮಾನವನ್ನು ಸ್ವಾಗತಿಸಿತು ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಲುಗ ಎಕ್ಸ್ ಎಲ್ ವಿಮಾನವು ಬೆಲುಗ ಎಸ್ಟಿ ಸರಣಿಯ ಸುಧಾರಿತ ಬೃಹತ್ ಗಾತ್ರದ ವಿಮಾನವಾಗಿದೆ.

ಇದಕ್ಕೂ ಮುನ್ನ ಕೋಲ್ಕತ್ತಾದಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಸ್ಟಿ ಸರಣಿಯ ವಿಮಾನಗಳಗೆ ಸ್ಥಳಾವಕಾಶ ಒದಗಿಸಿತ್ತಾದರೂ, ಇದೇ ಪ್ರಥಮ ಬಾರಿಗೆ ಮಂಗಳವಾರ ರಾತ್ರಿ ಎಕ್ಸ್ ಎಲ್ ಸರಣಿಯ ವಿಮಾನಕ್ಕೆ ತನ್ನ ನಿಲ್ದಾಣದಲ್ಲಿ ಸ್ಥಳಾವಕಾಶ ಒದಗಿಸಿದೆ ಎಂದು ಬುಧವಾರ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಮಾನವು ಮಂಗಳವಾರ ರಾತ್ರಿ 10.43ಕ್ಕೆ ಬಹ್ರೈನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವಿಮಾನವನ್ನು ಜಲವಂದನೆಯೊಂದಿಗೆ ಬರಮಾಡಿಕೊಳ್ಳಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News