×
Ad

ಕೇರಳ | ಕೂಡಲ್‌ಮಾಣಿಕ್ಯಂ ದೇವಾಲಯದಲ್ಲಿ ಜಾತಿ ತಾರತಮ್ಯ ಆರೋಪ : ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

Update: 2025-03-11 11:47 IST

Photo credit: keralakaumudi.com

ತ್ರಿಶೂರ್: ಕೂಡಲ್‌ಮಾಣಿಕ್ಯಂ ದೇವಾಲಯದಲ್ಲಿ ಜಾತಿ ತಾರತಮ್ಯದ ಬಗ್ಗೆ ನೌಕರರೋರ್ವರು ಆರೋಪಿಸಿರುವ ಬೆನ್ನಲ್ಲೇ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದೆ.

ಮಾನವ ಹಕ್ಕುಗಳ ಆಯೋಗದ ಸದಸ್ಯೆ ವಿ.ಗೀತಾ ಅವರು, ಎರಡು ವಾರಗಳಲ್ಲಿ ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೊಚ್ಚಿನ್ ದೇವಸ್ವಂ ಬೋರ್ಡ್ ಕಮಿಷನರ್ ಮತ್ತು ಕೂಡಲ್‌ಮಾಣಿಕ್ಯಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದಾರೆ.

ಈಜವ ಸಮುದಾಯದ ಸದಸ್ಯ ಬಿ ವಿ ಬಾಲು ಅವರನ್ನು ದೇವಸ್ವಂ ನೇಮಕಾತಿ ಮಂಡಳಿ ಕೂಡಲ್‌ಮಾಣಿಕ್ಯಂ ದೇವಾಲಯದಲ್ಲಿ ದೇವರಿಗೆ ಅಲಂಕಾರ ಮಾಡುವ ಕೆಲಸಕ್ಕೆ ನೇಮಿಸಿದೆ. ಆದರೆ, ಜಾತಿ ಕಾರಣಕ್ಕೆ ದೇವಾಲಯದ ತಂತ್ರಿಗಳು ವಿರೋಧ ವ್ಯಕ್ತಪಡಿಸಿ, ಅವರನ್ನು ಪೂಜೆಯಿಂದಲೇ ದೂರವಿಟ್ಟಿದ್ದರು. ಬಳಿಕ ಅವರನ್ನು ಕಚೇರಿಯ ಕೆಲಸಕ್ಕೆ ನೇಮಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈಜವ ಮುನ್ನೆಟ್ಟ ಸಮಿತಿ ಈ ಕುರಿತು ಪ್ರತಿಕ್ರಿಯಿಸಿ, ದೇವಸ್ವಂ ಮಂಡಳಿ ಮೂಲಕ ನೇಮಕಗೊಂಡಿರುವ ಈಜವ ಸಮುದಾಯದ ನೌಕರನಿಗೆ ಬಹಿಷ್ಕಾರ ಹಾಕಿರುವ ಕೂಡಲ್‌ಮಾಣಿಕ್ಯಂ ದೇವಸ್ಥಾನದ ತಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈಜವ ಸಮುದಾಯದ ಸದಸ್ಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರುವ ಧೋರಣೆ ಸ್ವೀಕಾರಾರ್ಹವಲ್ಲ. ಪ್ರಗತಿಪರ ಸಿದ್ಧಾಂತ ಮತ್ತು ಜಾತ್ಯತೀತತೆಯ ಹೊರತಾಗಿಯೂ, ಅನೇಕರ ಮನಸ್ಸು ಇನ್ನೂ ಶತಮಾನಗಳ ಹಿಂದೆಯೇ ಇದೆ. ಇಂತಹ ನಡವಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ. ಅಸಮಾನತೆಗಳ ವಿರುದ್ಧ ಪ್ರಬಲ ಹೋರಾಟ ನಡೆಸುವುದಾಗಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News