ದಿಲ್ಲಿ ಸರಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಧರ್ಮೇಂದ್ರ ನೇಮಕ
Update: 2024-08-31 21:46 IST
ಐಎಎಸ್ ಅಧಿಕಾರಿ ಧರ್ಮೇಂದ್ರ | PTI
ಹೊಸದಿಲ್ಲಿ : 1989ನೇ ಬ್ಯಾಚ್‌ನ ಎಜಿಎಂಯುಟಿ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಧರ್ಮೇಂದ್ರ ಅವರನ್ನು ದಿಲ್ಲಿ ಸರಕಾರದ ನೂತನ ಕಾರ್ಯದರ್ಶಿಯಾಗಿ ಶನಿವಾರ ನೇಮಕ ಮಾಡಲಾಗಿದೆ.
ಕೇಂದ್ರ ಸರಕಾರದ ಗೃಹ ವ್ಯವಹಾರಗಳ ಸಚಿವಾಲಯ ಜಾರಿಗೊಳಿಸಿದ ಆದೇಶದ ಪ್ರಕಾರ ಪ್ರಸಕ್ತ ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಧರ್ಮೇಂದ್ರ ಅವರು, ಸೆಪ್ಟಂಬರ್ 1ಕ್ಕೆ ಅನ್ವಯವಾಗುವಂತೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದೆ.