×
Ad

ಬ್ಯಾಂಕ್‌ಗಳಿಗೆ ಎಲ್ಲಾ ಶನಿವಾರ ರಜೆ ನೀಡುವಂತೆ ಕೇಂದ್ರಕ್ಕೆ ಐಬಿಎ ಪ್ರಸ್ತಾವನೆ

Update: 2023-12-06 22:48 IST

ಸಾಂದರ್ಭಿಕ ಚಿತ್ರ.| Photo: PTI  

ಹೊಸದಿಲ್ಲಿ: ಬ್ಯಾಂಕ್‌ಗಳಿಗೆ ಎಲ್ಲಾ ಶನಿವಾರಗಳನ್ನು ಅಧಿಕೃತ ರಜಾದಿನವಾಗಿ ಘೋಷಿಸುವ ಕುರಿತಾದ ಪ್ರಸ್ತಾವನೆಯನ್ನು ಭಾರತೀಯ ಬ್ಯಾಂಕಿಂಗ್ ಅಸೋಸಿಯೇಶನ್ (ಐಬಿಎ) ಸಲ್ಲಿಸಿರುವುದಾಗಿ ಕೇಂದ್ರ ಸರಕಾರವು ಬುಧವಾರ ಲೋಕಸಭೆಗೆ ತಿಳಿಸಿದೆ.

ವಿತ್ತ ಖಾತೆಯ ಸಹಾಯಕ ಸಚಿವ ಭಾಗ್ವತ್ ಕರಾಡ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಬ್ಯಾಂಕ್‌ಗಳಿಗೆ ವಾರದಲ್ಲಿ ಐದು ದಿನಗಳ ಕಾರ್ಯನಿರ್ವಹಣೆಯನ್ನು ನಿಗದಿಪಡಿಸುವ ಪ್ರಸ್ತಾವನೆಯನ್ನು ಐಬಿಎ ಈಗಾಗಲೇ ಸಲ್ಲಿಸಿರುವುದಾಗಿ ತಿಳಿಸಿದರು.

ಆದರೆ ಐಬಿಎನ ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲಾಗಿದೆಯೇ ಅಥವಾ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೇ ಎಂಬ ಬಗ್ಗೆ ಸಚಿವರು ಯಾವುದೇ ಮಾಹಿತಿಯನ್ನು ನೀಡಲಿಲ್ಲ.

2015ರಿಂದೀಚೆಗೆ ಪ್ರತಿ ತಿಂಗಳ ಎರಡನೆ ಹಾಗೂ ಕೊನೆಯ ಶನಿವಾರದಲ್ಲಿ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜಾದಿನಗಳೆಂದು ಜಾರಿಗೆ ತರಲಾಗಿತ್ತು. ಆದರೆ ಬ್ಯಾಂಕ್‌ಗಳಿಗೆ ವಾರದಲ್ಲಿ ಐದು ದಿನಗಳ ಕೆಲಸದ ಅವಧಿಯನ್ನು ಘೊಷಿಸಬೇಕೆಂಬ ಬೇಡಿಕೆ ಬಹಳ ಸಮಯದಿಂದ ನೆನೆಗುದಿಯಲ್ಲಿದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News