×
Ad

ಒಂದು ವೇಳೆ ನಿಮ್ಮ ಪತಿ ಮೋದಿ ಜಪ ಮಾಡಿದರೆ ಅವರಿಗೆ ಊಟ ನೀಡಬೇಡಿ: ಮಹಿಳಾ ಮತದಾರರಿಗೆ ಕೇಜ್ರಿವಾಲ್ ಕರೆ

Update: 2024-03-10 11:47 IST

ಅರವಿಂದ್ ಕೇಜ್ರಿವಾಲ್ | Photo : PTI

ಹೊಸ ದಿಲ್ಲಿ: ಒಂದು ವೇಳೆ ನಿಮ್ಮ ಪತಿ ಪ್ರಧಾನಿ ನರೇಂದ್ರ ಮೋದಿಯ ಜಪ ಮಾಡಿದರೆ, ಅಂಥವರಿಗೆ ಊಟವನ್ನು ನೀಡಬೇಡಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಿಳೆಯರಿಗೆ ಕರೆ ನೀಡಿದ್ದಾರೆ.

ದಿಲ್ಲಿಯ ಟೌನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಹಿಳಾ ಸಮ್ಮಾನ ಸಮಾರೋಹ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಹಲವಾರು ಪುರುಷರು ಪ್ರಧಾನಿ ಮೋದಿಯ ಜಪ ಮಾಡುತ್ತಿದ್ದಾರೆ. ನೀವು ಅಂಥವರನ್ನು ಸರಿ ಮಾಡಬೇಕು. ಒಂದು ವೇಳೆ ನಿಮ್ಮ ಗಂ ಮೋದಿ ಜಪ ಮಾಡಿದರೆ, ಅವರಿಗೆ ಊಟ ನೀಡಬೇಡಿ” ಎಂದು ಕರೆ ನೀಡಿದ್ದಾರೆ.

18 ವರ್ಷದ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ರೂ. 1,000 ಗೌರವ ಧನ ನೀಡುವುದಾಗಿ ದಿಲ್ಲಿ ಮಹಾನಗರ ಪಾಲಿಕೆಯು ತನ್ನ 2024-25ನೇ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿದ ನಂತರ ಮಹಿಳೆಯರೊಂದಿಗೆ ಸಂವಾದ ನಡೆಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದಲ್ಲದೆ, ಮಹಿಳೆಯರು ತಮ್ಮ ಕುಟುಂಬದ ಸದಸ್ಯರಿಗೆ ನನಗೆ ಮತ್ತು ಆಪ್ ಪಕ್ಷಕ್ಕೆ ಮತ ನೀಡುವುದಾಗಿ ಪ್ರಮಾಣ ಮಾಡುವಂತೆ ಸೂಚಿಸಿ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಬಿಜೆಪಿಯನ್ನು ಬೆಂಬಲಿಸುತ್ತಿರುವ ಮಹಿಳೆಯರಿಗೆ ನಿಮ್ಮ ಬೆನ್ನಿಗೆ ನಿಂತಿರುವುದು ನಿಮ್ಮ ಸಹೋದರ ಕೇಜ್ರಿವಾಲ್ ಎಂದು ಮನವರಿಕೆ ಮಾಡಿಕೊಡಿ ಎಂದೂ ಅವರು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News