×
Ad

ನನ್ನ ಸಲಹೆ ನಿರ್ಲಕ್ಷಿಸಿ, ಹಣ-ಅಧಿಕಾರದ ಮದವೇರಿಸಿಕೊಂಡಿದ್ದ ಕೇಜ್ರಿವಾಲ್: ಅಣ್ಣಾ ಹಝಾರೆ ವಾಗ್ದಾಳಿ

Update: 2025-02-08 14:05 IST

ಅಣ್ಣಾ ಹಝಾರೆ (PTI)

ಹೊಸದಿಲ್ಲಿ: ನನ್ನ ಸಲಹೆಯನ್ನು ನಿರ್ಲಕ್ಷಿಸಿ, ಅರವಿಂದ್ ಕೇಜ್ರಿವಾಲ್ ಹಣ-ಅಧಿಕಾರದ ಮದವೇರಿಸಿಕೊಂಡಿದ್ದರು ಎಂದು ಶನಿವಾರ ಅಣ್ಣಾ ಹಝಾರೆ ವಾಗ್ದಾಳಿ ನಡೆಸಿದರು.

ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅಣ್ಣಾ ಹಝಾರೆ, “ಅಭ್ಯರ್ಥಿಯ ನಡತೆ ಹಾಗೂ ಚಿಂತನೆಗಳು ಶುದ್ಧವಾಗಿರಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ. ಆತನ ಜೀವನವು ದೂಷಣೆಯಿಂದ ಹೊರತಾಗಿರಬೇಕು ಹಾಗೂ ತ್ಯಾಗದಿಂದ ತುಂಬಿರಬೇಕು. ಇಂತಹ ಗುಣಗಳಿಂದ ಮಾತ್ರ ಆತ ಮತದಾರರ ವಿಶ್ವಾಸ ಗಳಿಸಬಲ್ಲ” ಎಂದು ಹೇಳಿದರು.

“ನಾನು ಇದನ್ನು ಆತನಿಗೆ (ಅರವಿಂದ್ ಕೇಜ್ರಿವಾಲ್) ಹೇಳಿದೆ. ಆದರೆ, ಆತ ಅದಕ್ಕೆ ಕಿವಿಗೊಡಲಿಲ್ಲ. ಕೊನೆಗೆ, ಆತ ಮದ್ಯದ ಮೇಲೆ ಗಮನ ಹರಿಸಿದ. ಈ ವಿಷಯ ಮುನ್ನೆಲೆಗೆ ಬಂದಿದ್ದು ಏಕೆ? ಆತ ಹಣ ಮತ್ತು ಅಧಿಕಾರದಿಂದ ಮದವೇರಿಸಿಕೊಂಡಿದ್ದ” ಎಂದು ಅವರು ಕುಟುಕಿದರು.

“ರಾಜಕೀಯದಲ್ಲಿ ಆರೋಪಗಳನ್ನು ಮಾಡಲಾಗುತ್ತದೆ. ಆದರೆ, ನಾನು ತಪ್ಪಿತಸ್ಥನಲ್ಲ ಎಂದು ನಿರೂಪಿಸಬೇಕಾಗುತ್ತದೆ. ಸತ್ಯವು ಸತ್ಯವಾಗಿಯೇ ಉಳಿಯುತ್ತದೆ. ಸಭೆಯೊಂದು ನಡೆದಾಗ, ನಾನು ಪಕ್ಷದ ಭಾಗವಾಗಕೂಡದು ಎಂದು ನಿರ್ಧರಿಸಿದೆ. ಆ ದಿನದಿಂದಲೇ ನಾನು ಹೊರಗುಳಿದೆ” ಎಂದೂ ಅಣ್ಣಾ ಹಝಾರೆ ಹೇಳಿದರು.

2011ರಲ್ಲಿ ಯುಪಿಎ ಸರಕಾರದ ವಿರುದ್ಧ ಅಣ್ಣಾ ಹಝಾರೆ ನೇತೃತ್ವದಲ್ಲಿ ನಡೆದಿದ್ದ ಭ್ರಷ್ಟಾಚಾರ ವಿರೋಧ ಹೋರಾಟದ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಮುನ್ನಲೆಗೆ ಬಂದಿದ್ದರು. ನಂತರ, ಅವರು ತಮ್ಮದೇ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದ್ದರು. 2013ರಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷವು, ಆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಚೊಚ್ಚಲ ಪ್ರಯತ್ನದಲ್ಲೇ ಅಧಿಕಾರಕ್ಕೆ ಬಂದಿತ್ತು. ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News