×
Ad

ಐಐಎಂ-ಕಲ್ಕತ್ತಾ ಅತ್ಯಾಚಾರ ಪ್ರಕರಣ: ಬಾಗಲಕೋಟೆ ಮೂಲದ ಆರೋಪಿಗೆ ಮಧ್ಯಂತರ ಜಾಮೀನು

Update: 2025-07-20 16:59 IST

Photo credit: PTI

ಕೋಲ್ಕತ್ತಾ: ಕೋಲ್ಕತ್ತಾ ಐಐಎಂನಲ್ಲಿ ನಡೆದಿದೆಯೆನ್ನಲಾದ ಅತ್ಯಾಚಾರ ಪ್ರಕರಣದ ಆರೋಪಿ ಬಾಗಲಕೋಟೆ ಮೂಲದ ವಿದ್ಯಾರ್ಥಿಗೆ ಶನಿವಾರ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಕಲ್ಕತ್ತಾ ಐಐಎಂ ಆವರಣದಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಆಪ್ತ ಸಮಾಲೋಚನೆಗೆಂದು ತೆರಳಿದ್ದ ಮಹಿಳೆಯೊಬ್ಬರು, ತಮ್ಮ ಮೇಲೆ ಐಐಎಂ ವಿದ್ಯಾರ್ಥಿಯಿಂದಲೇ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಸಂತ್ರಸ್ತ ಮಹಿಳೆ ನೀಡಿದ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿತ್ತು.

ಈ ಕುರಿತು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಅಲಿಪೋರ್ ನ್ಯಾಯಾಲಯದ ಹೆಚ್ಚುವರಿ ಮುಖ್ಯದ ನ್ಯಾಯಾಧೀಶರು ಆರೋಪಿಗೆ 50,000 ರೂ. ಬಾಂಡ್ ಮೇಲೆ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿತ ವಿದ್ಯಾರ್ಥಿಯು ತನ್ನ ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಶರಣಾಗಿಸಬೇಕು ಹಾಗೂ ಅನುಮತಿ ಇಲ್ಲದೆ ರಾಜ್ಯವನ್ನು ತೊರೆದು ಹೋಗಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News