×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ : ಶಿವಸೇನೆ(ಯುಬಿಟಿ) ಶಾಸಕ ರವೀಂದ್ರ ವಾಯಕರ್ ನಿವಾಸದ ಮೇಲೆ ಈಡಿ ದಾಳಿ

Update: 2024-01-09 20:52 IST

Ravindra Waikar (@RavindraWaikar) / X

ಮುಂಬೈ: ನಗರದ ಜೋಗೇಶ್ವರಿ ಪ್ರದೇಶದಲ್ಲಿ ಐಷಾರಾಮಿ ಹೋಟೆಲ್ ನಿರ್ಮಾಣದಲ್ಲಿ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈಡಿ)ವು ಮಂಗಳವಾರ ಶಿವಸೇನೆ (ಯುಬಿಟಿ) ಶಾಸಕ ರವೀಂದ್ರ ವಾಯಕರ್ ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ ಕೆಲವು ಸಂಸ್ಥೆಗಳ ಮೇಲೆ ದಾಳಿಗಳನ್ನು ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂಬೈನಲ್ಲಿಯ ಸುಮಾರು ಏಳು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆದಿದ್ದು, ಇವುಗಳಲ್ಲಿ ವಾಯಕರ್, ಅವರ ಕೆಲವು ಪಾಲುದಾರರು ಮತ್ತು ಇತರರ ನಿವಾಸಗಳು ಮತ್ತು ಕಚೇರಿಗಳು ಸೇರಿವೆ ಎಂದು ಅವು ಹೇಳಿವೆ.

ಶಿವಸೇನೆ (ಉದ್ಧವ ಠಾಕ್ರೆ ಬಣ) ಶಾಸಕ ವಾಯಕರ್(64) ಮಹಾರಾಷ್ಟ್ರ ವಿಧಾನಸಭೆಯಲ್ಲಿ ಜೋಗೇಶ್ವರಿ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಮುಂಬೈ ಪೋಲಿಸ್ ನ ಆರ್ಥಿಕ ಅಪರಾಧಗಳ ಘಟಕದ ಎಫ್ ಐ ಆರ್ ಆಧಾರದಲ್ಲಿ ಈಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ವಾಯಕರ್ ಉದ್ಯಾನವನಕ್ಕಾಗಿ ಮೀಸಲಾಗಿದ್ದ ನಿವೇಶನದಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣಕ್ಕಾಗಿ ಕಾನೂನುಬಾಹಿರವಾಗಿ ಅನುಮತಿಯನ್ನು ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಇದರಿಂದಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಭಾರೀ ನಷ್ಟವುಂಟಾಗಿದೆ ಎಂದೂ ಆಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News