×
Ad

ಸ್ವಾತಂತ್ರ್ಯ ದಿನಾಚರಣೆ | ಈ ವರ್ಷ 78ನೆಯ ಸ್ವಾತಂತ್ರ್ಯ ದಿನಾಚರಣೆಯೊ ಅಥವಾ 79ನೆಯದ್ದೊ?

Update: 2025-08-12 21:31 IST

PC : freepik.com

ಹೊಸದಿಲ್ಲಿ: ಮತ್ತೊಮ್ಮೆ ತ್ರಿವರ್ಣ ಧ್ವಜದ ರಂಗು ಬೀದಿಬೀದಿ, ಮನೆ-ಮನ ತುಂಬಿಕೊಳ್ಳಲು ಸಜ್ಜಾಗಿದೆ. ಎಂದಿನಂತೆ ದೇಶದ ತುಂಬಾ ದೇಶಪ್ರೇಮದ ಗೀತೆಗಳು, ಆಳವಾದ ಒಗ್ಗಟ್ಟನ ಭಾವನೆಗಳು ಮೈದಳೆದು, ದೇಶವು ಸ್ವತಂತ್ರಗೊಳ್ಳಲು ಕಾರಣರಾದವರ ತ್ಯಾಗ-ಬಲಿದಾನಗಳ ಸ್ಮರಣೆ ಮೈನವಿರೇಳಿಸಲಿದೆ.

ಇಂತಹ ಸಡಗರದ ಹೊತ್ತಿನಲ್ಲಿ ಜನರು ಭಾರತದ್ದು 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯೊ ಅಥವಾ 79ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯೊ ಎಂಬ ಗೊಂದಲಕ್ಕೂ ಈಡಾಗಿದ್ದಾರೆ. ಯಾಕೆಂದರೆ, ಭಾರತ ಸ್ವತಂತ್ರಗೊಂಡಿದ್ದು 1947ನೇ ಇಸವಿಯಲ್ಲಿ. ಈಗ ಚಾಲ್ತಿಯಲ್ಲಿರುವ ವರ್ಷ 2025. ಹೀಗಾಗಿ 2025ರಲ್ಲಿ 1947 ಅನ್ನು ಕಳೆದರೆ ಉಳಿಕೆ ಮೊತ್ತ 78 ಆಗುತ್ತದೆ.

ಆದರೆ, 1947ರಿಂದ 2025ರವರೆಗೆ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿ 78 ವರ್ಷಗಳಾಗುತ್ತವೆಯೇ ಹೊರತು, 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲ. ಈ ಗೊಂದಲ ಯಾಕೆಂದರೆ, 1947 ಅನ್ನು ಜನರು ಶೂನ್ಯದಿಂದ ಪ್ರಾರಂಭಿಸುತ್ತಾರೆ ಅಥವಾ 78ನೇ ವಾರ್ಷಿಕೋತ್ಸವ ಎಂಬುದನ್ನು ಮಾತ್ರ ಲೆಕ್ಕ ಮಾಡುತ್ತಾರೆ. ಆದರೆ, ಸ್ವಾತಂತ್ರ್ಯವನ್ನು ಮೊದಲ ಬಾರಿಗೆ ಪಡೆದ ವರ್ಷವನ್ನಲ್ಲ. ಹೀಗಾಗಿ ಸರಕಾರದ ಅಧಿಕೃತ ದಾಖಲೆಗಳು ಯಾವಾಗಲೂ ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವನ್ನೇ (ಆಗಸ್ಟ್ 15, 1947) ಪ್ರಥಮ ಸ್ವಾತಂತ್ರ್ಯ ಸಂಭ್ರಮಾಚರಣೆ ಎಂದೇ ಉಲ್ಲೇಖಿಸುತ್ತಾ ಬಂದಿವೆ.

ಹೀಗಾಗಿ, 1947ನೇ ವರ್ಷವನ್ನು ಪ್ರಥಮ ಸ್ವಾತಂತ್ರ್ಯ ಸಂಭ್ರಮಾಚರಣೆ ವರ್ಷ ಎಂದು ಲೆಕ್ಕ ಮಾಡುವುದೇ ಸರಿಯಾದ ಕ್ರಮವಾಗಿದೆ. ಅದರಂತೆ ಈ ಬಾರಿ ನಾವು ಆಚರಿಸುತ್ತಿರುವುದು 79ನೇ ಸ್ವಾತಂತ್ರ್ಯ ಸಂಭ್ರಮಾಚರಣೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News