×
Ad

ಭಾರತದಲ್ಲಿ ಮಕ್ಕಳ ಕುಬ್ಜತೆಗೆ ಜಾತಿ ತಾರತಮ್ಯ ಕಾರಣ!

Update: 2024-10-30 22:03 IST

PC : childrenontheedge.org

ಹೊಸದಿಲ್ಲಿ : ಭಾರತವು ಅರ್ಥಿಕವಾಗಿ ಸದೃಢವಾಗುತ್ತಿರುವ ಹೊರತಾಗಿಯೂ ದೇಶದಲ್ಲಿ ಪ್ರಾಯಕ್ಕೆ ಸರಿಯಾದ ದೇಹದ ಬೆಳವಣಿಗೆಯಿರದ ಮಕ್ಕಳ ಸಂಖ್ಯೆಯು ಸಬ್ ಸಹರನ್ ಆಫ್ರಿಕದ ರಾಷ್ಟ್ರಗಳ ಮಕ್ಕಳಿಗಿಂತ ಅಧಿಕವಾಗಿದೆ. ಭಾರತದಲ್ಲಿ ಜಾತಿ ತಾರತಮ್ಯವು ಅಧಿಕವಾಗಿರುವುದೇ ಇದಕ್ಕೆ ಕಾರಣವೆಂದು ‘ಜರ್ನಲ್ ಆಫ್ ಇಕನಾಮಿಕ್ಸ್, ರೇಸ್ ಆ್ಯಂಡ್ ಪಾಲಿಸಿ’ ನಿಯತಕಾಲಿಕವು ಅಕ್ಟೋಬರ್ 26ರಂದು ಪ್ರಕಟಿಸಿದ ಅಧ್ಯಯನ ವರದಿಯೊಂದು ತಿಳಿಸಿದೆ.

ಖ್ಯಾತ ಆರ್ಥಶಾಸ್ತ್ರಜ್ಞರಾದ ಅಶ್ವಿನಿ ದೇಶಪಾಂಡೆ ಹಾಗೂ ರಾಜೇಶ್ ರಾಮಚಂದ್ರನ್ ಅವರು ಈ ಅಧ್ಯಯನ ವರದಿಯನ್ನು ರಚಿಸಿದ್ದಾರೆ. ಭಾರತದಲ್ಲಿ ಐತಿಹಾಸಿಕವಾಗಿ ಕಡೆಗಣಿಸಲ್ಪಟ್ಟ ಸಮುದಾಯಗಳಾದ ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ ಮಕ್ಕಳು ಕುಳ್ಳಗಿರುವ ಸಾಧ್ಯತೆಯು, ಮೇಲ್ಜಾತಿಗಳವರ ಮಕ್ಕಳಿಗಿಂತ ಶೇ.50ರಷ್ಟು ಅಧಿಕವೆಂದು ವರದಿಯು ತಿಳಿಸಿದೆ.

ಮೇಲ್ಜಾತಿಯ ಪಂಗಡಗಳ ಶೇ.27ರಷ್ಟು ಮಕ್ಕಳಲ್ಲಿ ಕುಬ್ಜತೆಯುು ಕಂಡುಬಂದಿದೆ. ಸಬ್‌ಸಹರನ್ ಆಫ್ರಿಕದಲ್ಲಿ ಶೇ. 34ರಷ್ಟು ಮಕ್ಕಳು ವಯಸ್ಸಿಗಿಂತ ಕಡಿಮೆ ಎತ್ತರವನ್ನು ಹೊಂದಿದ್ದರೆ, ಭಾರತದಲ್ಲಿ ಅಂತಹ ಮಕ್ಕಳ ಸಂಖ್ಯೆ ಒಟ್ಟಾರೆ ಶೇ.36 ಆಗಿದೆ. ದೀರ್ಘಕಾಲದ ಅಥವಾ ಪುನರಾವರ್ತಿತ ಅಪೌಷ್ಟಿಕತೆಯು ಮಕ್ಕಳ ಕುಬ್ಜತನಕ್ಕೆ ಕಾರಣವೆಂದು ವರದಿಯು ಬೆಟ್ಟು ಮಾಡಿದೆ.

2022ರಲ್ಲಿ ಭಾರತದಲ್ಲಿ ವಯಸ್ಸಿಗೆ ಅನುಗುಣವಾದ ಎತ್ತರವನ್ನು ಹೊಂದಿರದ ಮಕ್ಕಳ ಸಂಖ್ಯೆ 2022ರಲ್ಲಿ 31.7 ಶೇ. ಆಗಿದ್ದರೆ, ಸಬ್‌ ಸಹರಣನ್ ಆಫ್ರಿಕದ ರಾಷ್ಟ್ರಗಳಲ್ಲಿ ಅಂತಹ ಮಕ್ಕಳ ಸಂಖ್ಯೆ 31.3 ಶೇ. ಆಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್), ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಬ್ಯಾಂಕ್ ಪ್ರಕಟಿಸಿದ ಮಕ್ಕಳ ಪೌಷ್ಟಿಕತೆ ಕುರಿತ ಜಂಚಿ ಅಂದಾಜು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News