×
Ad

ತತ್ಕಾಲ್ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಇ-ಆಧಾರ್ ಕಡ್ಡಾಯಗೊಳಿಸಲಿರುವ ಭಾರತೀಯ ರೈಲ್ವೆ

Update: 2025-06-05 17:03 IST
PC : PTI

ಹೊಸದಿಲ್ಲಿ: ತತ್ಕಾಲ್ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಇ-ಆಧಾರ್ ಮಾನ್ಯತೆಯನ್ನು ಕಡ್ಡಾಯಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, "ಅಗತ್ಯವಿರುವ ನೈಜ ಬಳಕೆದಾರರು ದೃಢೀಕೃತ ಟಿಕೆಟ್ ಪಡೆಯಲು ಈ ಕ್ರಮ ನೆರವು ನೀಡಲಿದೆ" ಎಂದು ಹೇಳಿದ್ದಾರೆ.

ಈ ನಡುವೆ, ಐಆರ್‌ಟಿಸಿ ಟಿಕೆಟ್ ಪೋರ್ಟಲ್ ಮೂಲಕ ಅನಧಿಕೃತ ಸ್ವಯಂಚಾಲಿತ ರೈಲು ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯನ್ನು ಮಟ್ಟ ಹಾಕಲು ಬಳಕೆಗೆ ತರಲಾಗಿರುವ ತನ್ನ ಕೃತಕ ಬುದ್ಧಿಮತ್ತೆ ಚಾಲಿತ ವ್ಯವಸ್ಥೆಯು ಇದುವರೆಗೆ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ ಬಳಸಲಾಗುತ್ತಿದ್ದ ಸುಮಾರು 2.5 ಕೋಟಿಗೂ ಹೆಚ್ಚು ಶಂಕಾಸ್ಪದ ಬಳಕೆದಾರರ ಗುರುತುಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಬುಧವಾರ ಭಾರತೀಯ ರೈಲ್ವೆ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News