×
Ad

ಭಾರತೀಯರಿಗೆ ಯಾವುದೇ ಅಸ್ಮಿತೆ ಇರಬಾರದು, ನಾವೆಲ್ಲರೂ ನರೇಂದ್ರ ಮೋದಿ: ಕಂಗನಾ ರಣಾವತ್‌

Update: 2024-04-13 11:08 IST

ಕಂಗನಾ ರಣಾವತ್‌ (Photo: PTI)

ಹೊಸದಿಲ್ಲಿ: ಭಾರತೀಯರಿಗೆ ತಮ್ಮದೇ ಆದ ಅಸ್ಮಿತೆ ಅಥವಾ ಗುರುತು ಇರಬಾರದು, “ನಾವೆಲ್ಲರೂ ನರೇಂದ್ರ ಮೋದಿ” ಎಂದು ನಟಿ ಹಾಗೂ ಬಿಜೆಪಿಯ ಮಂಡಿ ಕ್ಷೇತ್ರದ ಅಭ್ಯರ್ಥಿ ಕಂಗನಾ ರಣಾವತ್‌ ಹೇಳಿದ್ದಾರೆ.

ಹಿಮಾಚಲದ ಕುಲ್ಲು ಎಂಬಲ್ಲಿ ಪ್ರಚಾರ ರ‍್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು.

“ಸನಾತನ ಧರ್ಮ, ರಾಷ್ಟ್ರೀಯವಾದ ಮತ್ತು ದುಷ್ಟರ ವಿರುದ್ಧದ ಹೋರಾಟದ ಕಿಡಿಯನ್ನು ಪ್ರಧಾನಿ ನರೇಂದ್ರ ಮೋದಿ ನಮ್ಮ ಅಂತರಾತ್ಮಗಳಲ್ಲಿ ಹೊತ್ತಿಸಿದ್ದಾರೆ. ನಾವೆಲ್ಲರೂ ನಮ್ಮದೇ ಆದ ಗುರುತನ್ನು ಹೊಂದಬಾರದು, ನಾವೆಲ್ಲರೂ ನರೇಂದ್ರ ಮೋದಿ,” ಎಂದು ಕಂಗನಾ ಹೇಳಿದರು.

“ನಾವು ಅವರಿಗಾಗಿ, ಅವರ ಅಭಿವೃದ್ಧಿಯ ದೂರದೃಷ್ಟಿಗಾಗಿ ಅವರಿಗಾಗಿ ಹೋರಾಡೋಣ,”ಎಂದು ಕಂಗನಾ ಹೇಳಿದರು.

“ನಾನು ಪಕ್ಷಕ್ಕೆ ಸೇರಿದ ಸಮಯದಿಂದ ನನಗೆ ತನ್ನದೇ ಆದ ಅಸ್ಮಿತೆ ಉಳಿದಿಲ್ಲ, ಬದಲು ತನಗೆ ಒಂದೇ ಅಸ್ಮಿತೆ, ಅದು ಬಿಜೆಪಿ ಆಗಿದೆ. ನಾವೆಲ್ಲರೂ ಒಂದೇ,” ಎಂದು ಕಂಗನಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News