×
Ad

ಭಾರತದ ಅತ್ಯಂತ ಹಿರಿಯ ಸಂಸದ, ಸಮಾಜವಾದಿ ಪಕ್ಷದ ನಾಯಕ ಶಫಿಕುರ್ ರಹಮಾನ್ ಬರ್ಕ್ ನಿಧನ

Update: 2024-02-27 11:09 IST

ಶಫಿಕುರ್ ರಹಮಾನ್ ಬರ್ಕ್ (Photo: PTI)

ಹೊಸದಿಲ್ಲಿ: ಸಮಾಜವಾದಿ ಪಕ್ಷದ ನಾಯಕ ಹಾಗೂ ಸಂಸದ ಶಫಿಕುರ್ ರಹಮಾನ್ ಬಾರ್ಕ್ ಇಂದು ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಲೋಕಸಭೆಯ ಅತ್ಯಂತ ಹಿರಿಯ ಸಂಸದರಾಗಿದ್ದ ಶಫಿಕುರ್ ರಹಮಾನ್ ಬರ್ಕ್ ಮೊರಾದಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷವು, "ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಹಲವಾರು ಬಾರಿ ಸಂಸದರಾಗಿದ್ದ ಶಫಿಕುರ್ ರಹಮಾನ್ ಬರ್ಕ್ ಸಾಹೇಬರ ನಿಧನ ದುಃಖಕರವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ" ಎಂದು ಹೇಳಿದೆ.

"ಮೃತರ ಕುಟುಂಬದದ ಸದಸ್ಯರಿಗೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ದೊರೆಯಲಿ. ಹೃದಯಪೂರ್ವಕ ನಮನಗಳು" ಎಂದೂ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News