×
Ad

ಕ್ಷಿಪಣಿ ವಿನಾಶಕ ಯುದ್ಧನೌಕೆ ‘ಇಂಫಾಲ್’ ಮಂಗಳವಾರ ನೌಕಾಪಡೆಗೆ ಸೇರ್ಪಡೆ

Update: 2023-12-24 23:53 IST

ಹೊಸದಿಲ್ಲಿ: ಅತ್ಯಾಧುನಿಕ, ರಹಸ್ಯ ನಿರ್ದೇಶಿತ ಕ್ಷಿಪಣಿ ವಿನಾಶಕ ಯುದ್ಧನೌಕೆ ‘ಐಎನ್ಎಸ್ ಇಂಫಾಲ್ ’ ಮಂಗಳವಾರ ಮುಂಬೈನ ನೇವಲ್ ಡಾಕ್ಯಾರ್ಡ್ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ ಎಂದು ರಕ್ಷಣಾ ಸಚಿವಾಲಯವು ರವಿವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನಾಲ್ಕು ‘ವಿಶಾಖಪಟ್ಟಣಂ ’ವರ್ಗದ ವಿನಾಶಕ ಯುದ್ಧನೌಕೆಗಳ ಪೈಕಿ ಐಎನ್ಎಸ್ ಇಂಫಾಲ್ ನೌಕಾಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳ್ಳುತ್ತಿರುವ ಮೂರನೆಯ ಸ್ವದೇಶಿ ನಿರ್ಮಿತ ಹಡಗು ಆಗಿದೆ. ಭಾರತೀಯ ನೌಕಾಪಡೆಯ ವಾರ್ಶಿಪ್ ಡಿಸೈನ್ ಬ್ಯೂರೊ ವಿನ್ಯಾಸಗೊಳಿಸಿದ ನೌಕೆಯು ಮುಂಬೈನ ಮಜಗಾಂವ್ ಡಾಕ್ ಲಿಮಿಟೆಡ್ನಲ್ಲಿ ನಿರ್ಮಾಣಗೊಂಡಿದೆ.

ಗಮನಾರ್ಹವಾಗಿ ಇಂಫಾಲ್ ಈಶಾನ್ಯ ಭಾರತದ ನಗರವೊಂದರ ಹೆಸರನ್ನು ಹೊಂದಿರುವ ಮೊದಲ ಯುದ್ಧನೌಕೆಯಾಗಿದೆ. ನಾಮಕರಣ ಪ್ರಸ್ತಾವವನ್ನು ರಾಷ್ಟ್ರಪತಿಗಳು 2019, ಎ.16ರಂದು ಅನುಮೋದಿಸಿದ್ದು, ಇದು ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಪ್ರಗತಿಗೆ ಈ ಪ್ರದೇಶದ ಮಹತ್ವವನ್ನು ಒತ್ತಿ ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News