×
Ad

ವಿಮಾನದ ನಿರ್ಗಮನ ವಿಳಂಬವಾಗಲಿದೆ ಎಂದ ಪೈಲಟ್‌ಗೆ ಥಳಿಸಿದ ಪ್ರಯಾಣಿಕ; ವಿಡಿಯೋ ವೈರಲ್

Update: 2024-01-15 11:08 IST

Screengrab:X/@Capt_Ck

ಹೊಸದಿಲ್ಲಿ: ವಿಮಾನದ ನಿರ್ಗಮನ ವಿಳಂಬವಾಗಲಿದೆ ಎಂದು ವಿಮಾನದೊಳಗೆ ಉದ್ಘೋಷಣೆ ಮಾಡುತ್ತಿದ್ದ ಪೈಲಟ್‌ ಮೇಲೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್‌ ಆಗಿದೆ.

ದಟ್ಟ ಮಂಜು ಕವಿದ ವಾತಾವರಣದಿಂದಾಗಿ ದಿಲ್ಲಿಯಿಂದ ಗೋವಾಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಹಲವು ಗಂಟೆಗಳ ಕಾಲ ವಿಳಂಬಗೊಂಡಿತ್ತು. ಪೈಲಟ್‌ ಮೇಲೆ ಕೈ ಮಾಡಿದ ಪ್ರಯಾಣಿಕನನ್ನು ಸಾಹಿಲ್‌ ಕಟಾರಿಯಾ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಇಂಡಿಗೋ ಸಂಸ್ಥೆ ಪೊಲೀಸ್‌ ದೂರು ನೀಡಿದೆ.

ಹಳದಿ ಬಣ್ಣದ ಹೂಡಿ ಧರಿಸಿದ್ದ ಪ್ರಯಾಣಿಕರೊಬ್ಬರು ಹಿಂದಿನ ಸಾಲಿನಿಂದ ದಿಢೀರ್‌ ಎಂದು ಎದ್ದು ವಿಮಾನದ ಸಹ-ಪೈಲಟ್‌ ಅನೂಪ್‌ ಕುಮಾರ್‌ಗೆ ಹಲ್ಲೆಗೈಯ್ಯುತ್ತಿರುವುದು ಕಾಣಿಸುತ್ತದೆ. ವಿಮಾನದ ನಿರ್ಗಮನ ಹಲವು ಗಂಟೆಗಳ ಕಾಲ ವಿಳಂಬಗೊಂಡಿದ್ದರಿಂದ ಹಿಂದಿನ ಸಿಬ್ಬಂದಿಯ ಸ್ಥಾನದಲ್ಲಿ ಅನೂಪ್‌ ಆಗಮಿಸಿದ್ದರು ಹಾಗೂ ವಿಳಂಬದ ಕುರಿತು ಮಾಹಿತಿ ನೀಡುತ್ತಿದ್ದರು.

ಘಟನೆಯ ತಕ್ಷಣ ವಿಮಾನದಿಂದ ಆರೋಪಿ ಪ್ರಯಾಣಿಕನನ್ನು ಕೆಳಗಿಳಿಸಿ ಭದ್ರತಾ ಸಿಬ್ಬಂದಿಗಳಿಗೊಪ್ಪಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News