×
Ad

ಸಹೋದರ ಯೂಸುಫ್‌ ಪಠಾಣ್‌ ಪರ ಪ್ರಚಾರ ನಡೆಸಿದ ಇರ್ಫಾನ್‌ ಪಠಾಣ್‌

Update: 2024-05-10 17:42 IST

PC :  X/@ANI

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಹರಾಂಪುರ್‌ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ ಪಡೆದಿರುವ ತಮ್ಮ ಸೋದರ ಯೂಸುಫ್‌ ಪಠಾಣ್‌ ಪರ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ಇರ್ಫಾನ್‌ ಪಠಾಣ್‌ ಗುರುವಾರ ಪ್ರಚಾರ ನಡೆಸಿದ್ದಾರೆ. ಯೂಸುಫ್‌ ಖಾನ್‌ ಅವರು ಪಶ್ಚಿಮ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧುರಿ ಅವರನ್ನು ಎದುರಿಸುತ್ತಿದ್ದಾರೆ.

ಬೆಲ್ಡಾಂಗ ಪ್ರದೇಶದಲ್ಲಿ ನಡೆದ ರೋಡ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದ ಇರ್ಫಾನ್‌, ಸಹೋದರನಿಗೆ ವ್ಯಾಪಕ ಬೆಂಬಲವಿದೆ, ಆತ ಗೆದ್ದು ಜನರ ಸೇವೆ ಮಾಡಲಿದ್ದಾನೆಂಬ ವಿಶ್ವಾಸವಿದೆ ಎಂದರು.

ಇರ್ಫಾನ್‌ ಸಹೋದರರೊಂದಿಗೆ ಟಿಎಂಸಿ ನಾಯಕ ಅಬು ತಾಹಿರ್‌ ಖಾನ್‌ ಇದ್ದರು.

ಇರ್ಫಾನ್‌ ತಮ್ಮ ಸಹೋರ ಯೂಸುಫ್‌ ಪಠಾಣ್‌ ಅವರ ಪರ ಪ್ರಚಾರ ನಡೆಸುವುದರಿಂದ ಅಧೀರ್‌ ರಂಜನ್‌ ಚೌಧುರಿ ಅವರ ಗೆಲ್ಲುವ ಅವಕಾಶಗಳು ಕಡಿಮೆಯಾಗದು ಎಂದು ಕಾಂಗ್ರೆಸ್‌ ವಕ್ತಾರೆ ಸೌಮ್ಯ ಐಚ್‌ ರಾಯ್‌ ಹೇಳಿದ್ದಾರೆ.

ಬಹರಾಂಪುರದಲ್ಲಿ ಚುನಾವಣೆ ಮೇ 13ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News