×
Ad

ಇಸ್ರೊಗೆ ಚಾರಿತ್ರಿಕ ಸಾಧನೆ: ಕಕ್ಷೆ ಸೇರಿದ 4.4 ಟನ್‌ ಭಾರದ ಉಪಗ್ರಹ ʼಬಾಹುಬಲಿʼ

Update: 2025-11-02 19:22 IST

Photo Credit ; ANI

ಶ್ರೀಹರಿಕೋಟ (ಆಂಧ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ರವಿವಾರ ಸಂಜೆ ಉಡಾಯಿಸಿದ 4.4 ಟನ್‌ ಭಾರದ ಸಂವಹನ ಉಪಗ್ರಹ ‘ಸಿಎಂಎಸ್–03’ ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದೆ.

‘ಬಾಹುಬಲಿ’ ಎಂದು ಕರೆಯಲ್ಪಡುವ ಎಲ್‌ವಿಎಂ–ಎಂ5 ರಾಕೆಟ್‌ ರವಿವಾರ ಸಂಜೆ 5.26ಕ್ಕೆ ಶ್ರೀಹರಿಕೋಟದ ಸತೀಶ್ ಧವನ್‌ ಉಡ್ಡಯನ ಕೇಂದ್ರದಿಂದ ನಭಕ್ಕೇರಿತು. ಉಪಗ್ರಹವು ಭೂಹೊಂದಾಣಿಕೆ ವರ್ಗಾವಣೆ ಕಕ್ಷೆ (ಜಿಯೊಸಿಂಕ್ರೊನಸ್ ಟ್ರಾನ್ಸ್‌ಫರ್‌ ಆರ್ಬಿಟ್‌–GTO)ಗೆ ಸೇರುವಲ್ಲಿ ಯಶಸ್ವಿಯಾಯಿತು ಎಂದು ಇಸ್ರೊ ಪ್ರಕಟಿಸಿದೆ.

4,410 ಕೆ.ಜಿ ತೂಕದ ಈ ಉಪಗ್ರಹವು ದೇಶದ ಬಾಹ್ಯಾಕಾಶ ಉಡ್ಡಯನ ಇತಿಹಾಸದಲ್ಲೇ ಭಾರಿ ತೂಕದ ಸಂವಹನ ಉಪಗ್ರಹವಾಗಿದ್ದು, ಇದು ಇಸ್ರೊ ಸಾಧನೆಗೆ ಮತ್ತೊಂದು ಗರಿಮೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News