×
Ad

ಜಗನ್ ಮೋಹನ್ ರೆಡ್ಡಿ ಕಾರಿನಡಿಗೆ ಬಿದ್ದು ವೈಎಸ್ಆರ್‌ಸಿಪಿ ಕಾರ್ಯಕರ್ತ ಮೃತ್ಯು

Update: 2025-06-22 18:54 IST

PC : X  \ @ghoshi_manjeet

ಗುಂಟೂರು : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವೈಎಸ್ಆರ್‌ಸಿಪಿ ಬೆಂಬಲಿಗನೋರ್ವ ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಕಾರು ಹರಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಚೀಲಿ ಸಿಂಗಯ್ಯ(55) ಮೃತರು. ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಹೂವುಗಳನ್ನು ಸುರಿಯಲು ಯತ್ನಿಸುವಾಗ ಆಯತಪ್ಪಿ ಬಿದ್ದು ಕಾರಿನ ಬಲ ಬದಿಯ ಚಕ್ರವು ಅವರ ಕುತ್ತಿಗೆಯ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ವೈಎಸ್ಆರ್‌ಸಿಪಿ ಬೆಂಬಲಿಗರು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ ಅವರು ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಗುಂಟೂರು ಪೊಲೀಸ್ ವರಿಷ್ಠಾಧಿಕಾರಿ ಎಸ್. ಸತೀಶ್ ಕುಮಾರ್ ತಿಳಿಸಿದ್ದಾರೆ.

ಜಗನ್ ಅವರ ಬೆಂಗಾವಲು ವಾಹನದಿಂದ ಬಿದ್ದು ಚೀಲಿ ಸಿಂಗಯ್ಯ ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಜಗನ್ ಪ್ರಯಾಣಿಸುತ್ತಿದ್ದ ವಾಹನದಡಿ ಬಿದ್ದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಸಿಂಗಯ್ಯ ವೆಂಗಲಾಯಪಲೆಂ ಗ್ರಾಮದ ನಿವಾಸಿಯಾಗಿದ್ದು, ಜಗನ್ ಅವರನ್ನು ಸ್ವಾಗತಿಸಲು ಹೋಗಿದ್ದರು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News