×
Ad

ಎರಡನೇ ಅವಧಿಗೆ ರಾಜ್ಯ ಸಭೆ ಸದಸ್ಯರಾಗಿ ಜೈಶಂಕರ್ ಪ್ರಮಾಣ

Update: 2023-08-21 21:11 IST

ಎಸ್. ಜೈಶಂಕರ್ | Photo: PTI

ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೇರಿದಂತೆ 9 ಸಂಸದರು ಸೋಮವಾರ ರಾಜ್ಯ ಸಭೆಯ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಂಸತ್ ಭವನದಲ್ಲಿ ರಾಜ್ಯ ಸಭೆಯ ಅಧ್ಯಕ್ಷ ಜಗದೀಪ್ ಧನ್‌ಕರ್ ಅವರು ಪ್ರಮಾಣ ವಚನ ಬೋಧಿಸಿದರು.

ರಾಜ್ಯ ಸಭೆಯ ಸಂಸದರಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಜೈಶಂಕರ್ ಎಕ್ಸ್‌ನಲ್ಲಿ ಕೃತಜ್ಞತೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ‘‘ನಾನು ಇಂದು ರಾಜ್ಯ ಸಭೆಯ ಸದಸ್ಯನಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ದೇಶದ ಜನರಿಗೆ ಸೇವೆ ಸಲ್ಲಿಸುವ ಅವಕಾಶ ನೀಡಿದ ಗುಜರಾತ್ ಜನರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಕೃತಜ್ಞತೆಗಳು’’ ಎಂದು ಅವರು ‘ಎಕ್ಸ್’ನಲ್ಲಿ ಪೊಸ್ಟ್ ಮಾಡಿದ್ದಾರೆ.

ಜೈಶಂಕರ್ ಅಲ್ಲದೆ, ಪ್ರಮಾಣ ವಚನ ಸ್ವೀಕರಿಸಿದ ಇತರ ಬಿಜೆಪಿ ಸದಸ್ಯರೆಂದರೆ ಬಾಬುಭಾ ಜೆಸೆಂಗ್‌ಭಾ ದೇಸಾಯಿ (ಗುಜರಾತ್), ಕೇಸರಿದೇವ್ ಸಿನ್ಹ ಝಲಾ (ಗುಜರಾತ್) ಹಾಗೂ ನಾಂಗೇಂದ್ರ ರಾಯ್ (ಪಶ್ಚಿಮಬಂಗಾಳ).

ತೃಣಮೂಲ ಕಾಂಗ್ರೆಸ್‌ನ ಐವರು ಸಂಸದರಾದ ಡೆರಿಕ್ ಒಬ್ರಿಯಾನ್, ಡೋಲಾ ಸೇನ್, ಸುಖೇಂದು ಶೇಖರ್ ರಾಯ್, ಪ್ರಕಾಶ್ ಚಿಕ್ ಬರೈಕ ಹಾಗೂ ಸಮಿರುಲ್ ಇಸ್ಲಾಂ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಬ್ರಿಯಾನ್, ಸೇನ್ ಹಾಗೂ ರಾಯ್ ಬೆಂಗಾಳಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News