×
Ad

ಜಮ್ಮುಕಾಶ್ಮೀರ: ನಿಗೂಢ ಸಾವು; ಇನ್ನೂ ಕಾರಣ ಬಹಿರಂಗಪಡಿಸದ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು

Update: 2025-02-10 20:10 IST

ಸಾಂದರ್ಭಿಕ ಚಿತ್ರ | PC : PTI

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಬದಹಾಲ್ ಗ್ರಾಮದಲ್ಲಿ 17 ಮಂದಿ ನಿಗೂಢವಾಗಿ ಸಾವನ್ನಪ್ಪಿದ ಎರಡಕ್ಕೂ ಅಧಿಕ ತಿಂಗಳುಗಳ ಬಳಿಕವೂ ಅಧಿಕಾರಿಗಳಿಗೆ ಇದಕ್ಕೆ ಕಾರಣವನ್ನು ಬಹಿರಂಗಪಡಿಸಲು ಸಾಧ್ಯವಾಗಿಲ್ಲ.

ಇದರಿಂದಾಗಿ 60 ಕುಟುಂಬಗಳ ಸುಮಾರು 400ಕ್ಕೂ ಅಧಿಕ ಜನರು ಕ್ವಾರೆಂಟೈನ್ ಕೇಂದ್ರಗಳಲ್ಲೇ ಕಳೆಯುತ್ತಿದ್ದಾರೆ. ಅವರಿಗೆ ಸಾಮಾನ್ಯ ಜೀವನಕ್ಕೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ.

ಬದಹಾಲ್ ಗ್ರಾಮದಲ್ಲಿ 2024 ಡಿಸೆಂಬರ್ 7ರಿಂದ ಮೂರು ಕುಟುಂಬಗಳ 13 ಮಕ್ಕಳು ಸೇರಿದಂತೆ 17 ಮಂದಿ ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ 38 ರೋಗಿಗಳು ಗುಣಮುಖರಾಗಿದ್ದಾರೆ ಹಾಗೂ ಬಿಡುಗಡೆಯಾಗಿದ್ದಾರೆ. ಆದರೆ, ಕಾಯಿಲೆಯ ಕಾರಣ ಈಗಲೂ ನಿಗೂಡವಾಗಿಯೇ ಇದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಗ್ವಾಲಿಯರ್‌ನ ಡಿಆರ್‌ಡಿಇ, ಚಂಡಿಗಢದ ಪಿಜಿಐ ಹಾಗೂ ಹೊಸದಿಲ್ಲಿ ಏಮ್ಸ್ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ತಜ್ಞರು ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಹಾಗೂ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಇದುವರೆಗೆ ಫಲಿತಾಂಶವನ್ನು ಪ್ರಕಟಿಸಿಲ್ಲ.

ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಫಲಿತಾಂಶ ವಿಳಂಬವಾಗುತ್ತಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.

‘‘ಆರೋಗ್ಯ ಸಂಸ್ಥೆಗಳು ಇನ್ನೂ ಮಾದರಿಗಳ ಫಲಿತಾಂಶವನ್ನು ಬಿಡುಗಡೆ ಮಾಡದೇ ಇರುವುದು ದುರಾದೃಷ್ಟಕರ. ಮೊದಲನೇ ಸಾವು ಸಂಭವಿಸಿದ 2 ತಿಂಗಳುಗಳು ಕಳೆದಿವೆ. ಆದರೂ ಈ ನಿಗೂಡ ಕಾಯಿಲೆಗೆ ಕಾರಣ ಏನು ಎಂಬುದು ಇದುವರೆಗೆ ನಮಗೆ ತಿಳಿದಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ವಿಜ್ಞಾನಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ಇದು ನೈಸರ್ಗಿಕ ತುರ್ತು. ಅಲ್ಲದೆ, ಮಾದರಿಯ ಪರೀಕ್ಷೆ ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳಬೇಕಿತ್ತು. ಫಲಿತಾಂಶ ಈಗ ಬಂದಿರಬೇಕಿತ್ತು’’ ಎಂದು ಅವರು ಹೇಳಿದ್ದಾರೆ.

ಕಾಯಿಲೆಯ ಕಾರಣ ತಿಳಿಯದೆ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಉಂಟಾಗುವ ತೊಂದರೆಗಳ ಕುರಿತು ವೈದ್ಯರು ಗಮನ ಸೆಳೆದಿದ್ದಾರೆ. ‘‘ಹೆಚ್ಚು ಪ್ರಕರಣಗಳು ವರದಿಯಾದರೆ, ನಾವು ಅವರಿಗೆ ಚಿಕಿತ್ಸೆ ನೀಡಲು ಯಾವ ಶಿಷ್ಟಾಚಾರವನ್ನು ಅನುಸರಿಸಬೇಕು ? ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ನಮಗೆ ಯಾವುದೇ ಶಿಷ್ಟಾಚಾರಗಳನ್ನು ವಿಧಿಸಿಲ್ಲ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News