×
Ad

ಜಮ್ಮು-ಕಾಶ್ಮೀರ: ಸಂಪೂರ್ಣ ಮದ್ಯ ನಿಷೇಧ ಆಗ್ರಹಿಸಿ ಎನ್‌ಸಿ, ಪಿಡಿಪಿ ಶಾಸಕರಿಂದ ಖಾಸಗಿ ಮಸೂದೆ ಮಂಡನೆ

Update: 2025-02-12 21:11 IST

ಸಾಂದರ್ಭಿಕ ಚಿತ್ರ | PC : freepik.com

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗ್ರಹಿಸಿ ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶಾಸಕರು ಬುಧವಾರ ವಿಧಾನ ಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿದರು.

ಕಾಶ್ಮೀರದ ಸಂಸ್ಕೃತಿ ಹಾಗೂ ಧಾರ್ಮಿಕ ಅನನ್ಯತೆಯ ಸುರಕ್ಷೆಗೆ ಮದ್ಯ ನಿಷೇಧ ಅತ್ಯಗತ್ಯ ಎಂದು ಕುಪ್ವಾರದ ಪಿಡಿಪಿ ಶಾಸಕ ಫಯಾಝ್ ಅಹ್ಮದ್ ಮಿರ್ ಹಾಗೂ ಎನ್‌ಸಿ ಶಾಸಕ ಅಹ್ಸಾನ್ ಪರ್ದೇಶಿ ಅವರು ಪ್ರತಿಪಾದಿಸಿದರು.

ಮದ್ಯ ಸೇವನೆಯು ಜಮ್ಮು ಹಾಗೂ ಕಾಶ್ಮೀರದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ರೂಪಿಸಿರುವ ಸೂಫಿ-ರೆಶಿ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಇಬ್ಬರು ಶಾಸಕರು ಹೇಳಿದರು.

ಈ ಮದ್ಯ ನಿಷೇಧ ಪ್ರಸ್ತಾವಕ್ಕೆ ಜಮ್ಮು ಹಾಗೂ ಕಾಂಗ್ರೆಸ್ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಬೆಂಬಲ ವ್ಯಕ್ತಪಡಿಸಿತು.

‘‘ಕಾಶ್ಮೀರದ ಸೂಫಿ ಸಂಪ್ರದಾಯ ಹಾಗೂ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಹಿನ್ನೆಲೆಯಲ್ಲಿ ಮದ್ಯ ಸೇವನೆಯನ್ನು ನಿಗ್ರಹಿಲು ಕಠಿಣ ಕ್ರಮಗಳ ಅಗತ್ಯತೆ ಇದೆ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಜಿ.ಎನ್. ಮೊಂಗಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News