ಜಮ್ಮುಕಾಶ್ಮೀರ ಗುಂಡಿನ ಕಾಳಗ| ಕಥುವಾದಲ್ಲಿ ಜೈಷ್ ಭಯೋತ್ಪಾದಕನ ಹತ್ಯೆ
Update: 2026-01-23 21:10 IST
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ,ಜ.23: ಕಥುವಾದ ಬಿಲಾವರ್ ಪ್ರದೇಶದಲ್ಲಿ ಶುಕ್ರವಾರ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಜೈಷ್ ಮುಹಮ್ಮದ್‌ಗೆ ಸೇರಿದ ಭಯೋತ್ಪಾದಕನೋರ್ವ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಸೇನೆ ಮತ್ತು ಸಿಆರ್‌ಪಿಎಫ್ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಜಮ್ಮುಕಾಶ್ಮೀರ ಪೊಲೀಸರ ಸಣ್ಣ ತಂಡವೊಂದು ಓರ್ವ ಪಾಕಿಸ್ತಾನಿ ಜೈಷ್ ಭಯೋತ್ಪಾದಕನ್ನು ಹೊಡೆದುರುಳಿಸಿದೆ ಎಂದು ಜಮ್ಮು ಐಜಿಪಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ಕಥುವಾದಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.