×
Ad

ಜಮ್ಮು-ಕಾಶ್ಮೀರ | ಕುಪ್ವಾರಾದಲ್ಲಿ ಗುಂಡಿನ ಚಕಮಕಿ ; ಪಾಕ್ ಪ್ರಜೆಯ ಹತ್ಯೆ, ಇಬ್ಬರು ಯೋಧರಿಗೆ ಗಾಯ

Update: 2024-07-27 21:06 IST

ಸಾಂದರ್ಭಿಕ ಚಿತ್ರ

ಶ್ರೀನಗರ : ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನಿ ಪ್ರಜೆಯೋರ್ವ ಕೊಲ್ಲಲ್ಪಟ್ಟಿದ್ದು, ಇಬ್ಬರು ಭಾರತೀಯ ಯೋಧರು ಗಾಯಗೊಂಡಿದ್ದಾರೆ ಎಂದು ಸೇನೆಯು ತಿಳಿಸಿದೆ.

ನಿಯಂತ್ರಣ ರೇಖೆಯ ಮಚ್ಛಲ್ ವಿಭಾಗದ ಕಮ್ಕಾರಿಯ ಮುಂಚೂಣಿ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಗುಂಡಿನ ಕಾಳಗ ನಡೆದಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.

ಇದು ಕಳೆದೊಂದು ತಿಂಗಳಲ್ಲಿ ಕುಪ್ವಾರಾದಲ್ಲಿ ಇಂತಹ ನಾಲ್ಕನೇ ಗುಂಡಿನ ಕಾಳಗವಾಗಿದೆ.

ಬುಧವಾರ ಜಿಲ್ಲೆಯಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಶಂಕಿತ ಉಗ್ರನೋರ್ವ ಕೊಲ್ಲಲ್ಪಟ್ಟಿದ್ದು ಸೇನೆಯ ಓರ್ವ ಅಧಿಕಾರಿ ಗಾಯಗೊಂಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News