×
Ad

ಪುಲ್ವಾಮಾ ಹುತಾತ್ಮರಿಗೆ ಜಮ್ಮುಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶ್ರದ್ಧಾಂಜಲಿ

Update: 2024-02-14 21:33 IST

ಮನೋಜ್ ಸಿನ್ಹಾ | Photo: ANI 

ಹೊಸದಿಲ್ಲಿ : ಪುಲ್ವಾಮಾ ಜಿಲ್ಲೆಯಲ್ಲಿ 2019ರ ಫೆ.14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 40 ಸಿಬ್ಬಂದಿಗೆ, ಜಮ್ಮುಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗುರುವಾರ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘‘ 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕೆಚ್ಚೆದೆಯ ವೀರರಿಗೆ ವಿನಮ್ರಪೂರ್ವಕ ಶ್ರದ್ಧಾಂಜಲಿಗಳು. ಅವರ ಅಸಾಧಾರಣ ಧೈಯ, ಪರಮೋಚ್ಛ ಬಲಿದಾನ ಹಾಗೂ ತಾಯ್ನಾಡಿಗೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ದೇಶವು ಚಿರಋಣಿಯಾಗಿರುವುದು ಎಂದು ಸಿನ್ಹಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪುಲ್ವಾಮಾ ದಾಳಿಯ ಐದನೇ ವರ್ಷಾಚರಣೆಯ ಅಂಗವಾಗಿ ಸಿಆರ್ಪಿಎಫ್ ಸೇರಿದಂತೆ ಭದ್ರತಾಪಡೆಗಳು, ರಾಜಕೀಯ ಪಕ್ಷಗಳುಹಾಗೂ ಸಾಮಾಜಿಕ ಗುಂಪುಗಳುಮತ್ತಿತರ ವಿವಿಧ ಸಂಘಟನೆಗಳು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News