×
Ad

ಜಮ್ಮು ಕಾಶ್ಮೀರ: ಸೇನಾ ವಾಹನದ ಮೇಲೆ ಶಂಕಿತ ಉಗ್ರರಿಂದ ದಾಳಿ

Update: 2024-07-08 22:50 IST

ಸಾಂದರ್ಭಿಕ ಚಿತ್ರ

ಕಥುವಾ/ಜಮ್ಮು : ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯ ದುರ್ಗಮ ಮಚೇಡಿ ಪ್ರದೇಶದಲ್ಲಿ ಸೋಮವಾರ ಸೇನಾ ವಾಹನದ ಮೇಲೆ ಶಂಕಿತ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಇತರ 6 ಮಂದಿ ಯೋಧರು ಗಾಯಗೊಂಡಿದ್ದಾರೆ.

ಕಥುವಾ ಪಟ್ಟಣದಿಂದ 150 ಕಿ.ಮೀ. ದೂರದಲ್ಲಿರುವ ಲೊಹಾಯಿ ಮಲ್ಹಾರ್ನ ಬಡ್ನೋಟಾ ಗ್ರಾಮದ ಸಮೀಪದ ಮಚೇಡಿ-ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ಎಂದಿನಂತೆ ಗಸ್ತು ನಡೆಸುತ್ತಿದ್ದ ಸೇನಾ ವಾಹನವನ್ನು ಗುರಿಯಾಗಿರಿಸಿ ಶಂಕಿತ ಭಯೋತ್ಪಾದಕರು ಸಂಜೆ ಸುಮಾರು 3 ಗಂಟೆಗೆ ಗ್ರೆನೆಡ್ ಹಾಗೂ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದವು. ಆದರೆ, ಶಂಕಿತ ಭಯೋತ್ಪಾದಕರು ಸಮೀಪದ ಅರಣ್ಯದ ಒಳಗೆ ಪರಾರಿಯಾದರು. ಈ ನಡುವೆ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಇತ್ತೀಚೆಗೆ ಒಳ ನುಸುಳಿದ್ದಾರೆಂದು ಹೇಳಲಾದ ಶಂಕಿತ ಭಯೋತ್ಪಾದಕರನ್ನು ಸದೆಬಡಿಯಲು ಸೇನಾ ಪಡೆ ಅಲ್ಲಿಗೆ ಧಾವಿಸಿದೆ. ಕಳೆದ ನಾಲ್ಕು ವಾರಗಳಲ್ಲಿ ಕಥುವಾ ಜಿಲ್ಲೆಯಲ್ಲಿ ಸಂಭವಿಸಿದ ಎರಡನೇ ಪ್ರಮುಖ ದಾಳಿ ಪ್ರಕರಣ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News