×
Ad

ಜಮ್ಮುಕಾಶ್ಮೀರ: ಶಂಕಿತ ಉಗ್ರನ ಸಹೋದರನ ಹತ್ಯೆ

Update: 2023-08-29 21:09 IST

ಸಾಂದರ್ಭಿಕ ಚಿತ್ರ

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಿಂದ ಕಾರ್ಯಾಚರಿಸುತ್ತಿರುವ ಶಂಕಿತ ಉಗ್ರನ ಸಹೋದರನನ್ನು ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಮಂಗಳವಾರ ಅನಾಮಿಕ ಬಂದೂಕುಧಾರಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಮುಖ್ತಾರ್ ಅಹ್ಮದ್ ಶಾ (42) ಎಂದು ಗುರುತಿಸಲಾಗಿದೆ. ಈತ ಕುಪ್ವಾರದ ಕರ್ನಾಹ್ನ ನಿವಾಸಿ.

ಹರಿದಾಲ್ ಪ್ರದೇಶದಲ್ಲಿ ರಾತ್ರಿ ಗುಂಡು ಹಾರಾಟ ನಡೆದ ಕುರಿತು ವರದಿಯಾಗಿದೆ. ಅನಂತರ ಶಾ ಅವರ ಮೃತದೇಹವನ್ನು ಪೊಲೀಸರು ಹಾಗೂ ಯೋಧರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹವನ್ನು ತಂಗ್ಧರ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾ ಅವರನ್ನು ಮಾದಕ ದ್ರವ್ಯಸಾಗಾಟ ಗುಂಪಿನ ಸದಸ್ಯರು ಅಥವಾ ಭಯೋತ್ಪಾದಕರು ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News