×
Ad

ಜಮ್ಮು-ಕಾಶ್ಮೀರ: ನೆಲ ಬಾಂಬ್ ಸ್ಫೋಟ ‘ಅಗ್ನಿವೀರ್’ ಯೋಧ ಸಾವು, ಇಬ್ಬರಿಗೆ ಗಾಯ

Update: 2024-01-18 22:34 IST

ಸಾಂದರ್ಭಿಕ ಚಿತ್ರ |  Photo:  PTI 

ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಗುರುವಾರ ನೆಲ ಬಾಂಬ್ ಸ್ಫೋಟಗೊಂಡು ‘ಅಗ್ನಿವೀರ್’ ಯೋಧ ಮೃತಪಟ್ಟಿದ್ದಾರೆ ಹಾಗೂ ಇತರ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ದೈನಂದಿನ ಗಸ್ತು ನಡೆಸುತ್ತಿದ್ದಾಗ ಈ ನೆಲಬಾಂಬ್ ಸ್ಫೋಟ ಸಂಭವಿಸಿದೆ. ಇದರಿಂದ ಕನಿಷ್ಠ ಮೂವರು ಯೋಧರು ಗಾಯಗೊಂಡರು. ಅವರನ್ನು ಕೂಡಲೇ ಉದಮ್ಪುರ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಗಂಭೀರ ಗಾಯಗೊಂಡಿದ್ದ ಓರ್ವ ಯೋಧ ಮೃತಪಟ್ಟ ಎಂದು ವರದಿ ತಿಳಿಸಿದೆ.

ಮೃತಪಟ್ಟ ಯೋಧನನ್ನು ಲುಧಿಯಾನದ ನಿವಾಸಿ ಹಾಗೂ ‘ಅಗ್ನಿ ವೀರ್’ ಯೋಧ ಅಜಯ್ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಯೋಧರನ್ನು ಸಿಪಾಯಿ ಬಲ್ವಂತ್ ಸಿಂಗ್ ಹಾಗೂ ಸುಬೇದಾರ್ ದರ್ಮಿಂದರ್ ಸಿಂಗ್ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News