ಜಾರ್ಖಂಡ್:16ರ ಹರೆಯದ ಬಾಲಕಿಯ ಸಾಮೂಹಿಕ ಅತ್ಯಾಚಾರ, ಐವರ ಬಂಧನ
Update: 2025-05-20 20:28 IST
ಸಾಂದರ್ಭಿಕ ಚಿತ್ರ | PC : freepik.com
ಡುಮ್ಕಾ: ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ 16ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಐವರನ್ನು ಸೋಮವಾರ ಸಂಜೆ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಮೇ 16ರಂದು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೇಯ ಘಟನೆ ನಡೆದಿತ್ತು.
ತಾನು ವಿವಾಹ ಸಮಾರಂಭಕ್ಕಾಗಿ ಸಂಬಂಧಿಯೋರ್ವರ ಮನೆಗೆ ತೆರಳಿದ್ದಾಗ ವ್ಯಕ್ತಿಯೋರ್ವ ತನ್ನನ್ನು ಬಲವಂತದಿಂದ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದ. ಅಲ್ಲಿ ಆತ ಮತ್ತು ಆತನ ನಾಲ್ವರು ಸಹಚರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ಮೇ 16ರಂದು ಸಲ್ಲಿಸಿರುವ ಪೋಲಿಸ್ ದೂರಿನಲ್ಲಿ ಆರೋಪಿಸಿದ್ದಾಳೆ.