×
Ad

ಜೆಎನ್.1 ಪ್ರಕರಣ 263ಕ್ಕೆ ಏರಿಕೆ

Update: 2024-01-02 20:33 IST

ಸಾಂದರ್ಭಿಕ ಚಿತ್ರ | Photo: PTI 

ಹೊಸದಿಲ್ಲಿ: ಕೋವಿಡ್ ನ ಜೆಎನ್.1 ಉಪ ಪ್ರಬೇಧದ ಮೊದಲ ಪ್ರಕರಣ ಪತ್ತೆಯಾದ ಡಿಸೆಂಬರ್ 8 ಹಾಗೂ ಜನವರಿ 2ರ ನಡುವೆ ದೇಶದಲ್ಲಿ ಒಟ್ಟು 263 ಜೆಎನ್.1 ಪ್ರಕರಣಗಳು ವರದಿಯಾಗಿವೆ ಎಂದು ಐಎನ್ಎಸ್ಎಸಿಒಜಿಯ ದತ್ತಾಂಶ ಗುರುವಾರ ತಿಳಿಸಿದೆ.

10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ನ ಉಪ ಪ್ರಬೇಧ ಜೆಎನ್.1 ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಬೇಧ ಪತ್ತೆಯಾದ ರಾಜ್ಯಗಳೆಂದರೆ ಕೇರಳ (133), ಗೋವಾ (51), ಗುಜರಾತ್ (34), ದಿಲ್ಲಿ (16), ಕರ್ನಾಟಕ (8), ಮಹಾರಾಷ್ಟ್ರ (9), ರಾಜಸ್ಥಾನ (5), ತಮಿಳುನಾಡು (4), ತೆಲಂಗಾಣ (2) ಹಾಗೂ ಒಡಿಸಾ (1) ಎಂದು ಅದು ತಿಳಿಸಿದೆ.

ದೇಶದಲ್ಲಿ ಡಿಸೆಂಬರ್ನಲ್ಲಿ ದಾಖಲಾದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ 239 ಪ್ರಕರಣಗಳಲ್ಲಿ ಜೆನ್.1 ವೈರಸ್ ಪತ್ತೆಯಾಗಿದೆ. ನವೆಂಬರ್ನಲ್ಲಿ ಇಂತಹ 24 ಪ್ರಕರಣಗಳು ವರದಿಯಾಗಿವೆ ಎಂದು ಐಎನ್ಎಸ್ಎಸಿಒಜಿ ದತ್ತಾಂಶ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಜೆಎನ್.1 ಅನ್ನು ಪ್ರತ್ಯೇಕ ‘‘ಆಸಕ್ತಿಯ ಪ್ರಬೇಧ’’ ಎಂದು ವರ್ಗೀಕರಿಸಿದೆ. ಆದರೆ, ಲಭ್ಯವಿರುವ ಪುರಾವೆಗಳ ಪ್ರಕಾರ ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಅತ್ಯಂತ ಕಡಿಮೆ ಎಂದು ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News