×
Ad

ಗಾಝಿಯಾಬಾದ್:‌ ಪೊಲೀಸ್‌ ವಾಹನಕ್ಕೆ ಹಾನಿಗೈದು ಬುಡಮೇಲುಗೊಳಿಸಿದ ಕನ್ವರಿಯಾಗಳು; ಆರೋಪ

Update: 2024-07-29 13:12 IST

ScreengrabPhoto: X/ @SachinGuptaUP

ಗಾಝಿಯಾಬಾದ್: ಕನ್ವರಿಯಾಗಳ ಗುಂಪೊಂದು ಗಾಝಿಯಾಬಾದ್‌ನಲ್ಲಿ ಪೊಲೀಸ್‌ ವಾಹನವೊಂದನ್ನು ಹಾನಿಗೈದು ಅದನ್ನು ಬುಡಮೇಲು ಮಾಡಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್‌ ಆಗಿದ್ದು ಅದರಲ್ಲಿ ಪೊಲೀಸ್‌ ಎಂದು ಬರೆಯಲಾಗಿದ್ದ ಕಾರಿಗೆ ಕನ್ವರಿಯಾಗಳು ಹಾನಿಗೈಯ್ಯುತ್ತಿರುವುದು ಕಾಣಿಸುತ್ತದೆ.

ವಿದ್ಯುತ್‌ ನಿಗಮದ ವಿಜಿಲೆನ್ಸ್‌ ಇಲಾಖೆಗಾಗಿ ಕಾರ್ಯಾಚರಿಸುತ್ತಿದ್ದ ಖಾಸಗಿ ಕಾರು ಕನ್ವರಿಯಾ ಒಬ್ಬನಿಗೆ ಆಕಸ್ಮಿಕವಾಗಿ ಢಿಕ್ಕಿ ಹೊಡೆದ ನಂತರ ಈ ಘಟನೆ ನಡೆದಿದೆ. ಅಪಘಾತದಲ್ಲಿ ಕನ್ವರಿಯಾಗೆ ಯಾವುದೇ ಗಾಯವಾಗದೇ ಇದ್ದರೂ ಇತರ ಕನ್ವರಿಯಾಗಳು ಆಕ್ರೋಶಿತರಾಗಿ ತಮ್ಮ ಕೋಪವನ್ನು ಪೊಲೀಸ್‌ ವಾಹನದ ಮೇಲೆ ತೋರಿಸಿದ್ದರು.

ಕನ್ವರಿಯಾಗೆ ಢಿಕ್ಕಿ ಹೊಡೆದ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜುಲೈ 21ರಂದು ಹರಿದ್ವಾರದಿಂದ ವಾಪಸಾಗುತ್ತಿದ್ದ ಕನ್ವರಿಯಾಗಳು ಕಾರೊಂದು ತಮ್ಮನ್ನು ದಿಲ್ಲಿ ಹೆದ್ದಾರಿಯಲ್ಲಿ ತಾಗಿಕೊಂಡು ಹೋಯಿತು ಎಂಬ ಕಾರಣಕ್ಕಾಗಿ ಆ ಕಾರನ್ನು ಪುಡಿಗಟ್ಟಿದ್ದರು. ವಾಹನ ತಮಗೆ ತಾಗಿದ್ದರಿಂದ ತಾವು ತರುತ್ತಿದ್ದ ಗಂಗಾಜಲ ಅಪವಿತ್ರಗೊಂಡಿದೆ ಎಂದು ಕನ್ವರಿಯಾಗಳು ಆರೋಪಿಸಿದ್ದರು.

ಇದಕ್ಕೂ ಮೊದಲು ಮುಝಫ್ಫರನಗರದಲ್ಲಿ ಧಾಬಾವೊಂದರಲ್ಲಿ ನೀಡಿದ ಆಹಾರದಲ್ಲಿ ಈರುಳ್ಳಿ ಇತ್ತೆಂಬ ಕಾರಣಕ್ಕೆ ಕನ್ವರಿಯಾಗಳ ಗುಂಪು ಆ ಡಾಬಾದಲ್ಲಿ ದಾಂಧಲೆಗೈದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News