×
Ad

‘ರಾಹುಲ್ ಗಿಂತ ಮೋದಿ ಹೆಚ್ಚು ಜನಪ್ರಿಯ’ ಹೇಳಿಕೆ: ಕಾರ್ತಿ ಚಿದಂಬಂರಂಗೆ ಸಂಕಷ್ಟ

Update: 2024-01-10 22:51 IST

Photo: PTI

ಚೆನ್ನೈ : ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆಗಾಗಿ ತಮಿಳುನಾಡು ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಹಾಗೂ ಹಿರಿಯ ನಾಯಕ, ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದ ಕಾರ್ತಿ ಚಿದಂಬರಂ ಅವರಿಗೆ ಶೋಕಾಸ್ ನೋಟಿಸನ್ನು ಹೊರಡಿಸಿದೆ.

ಸಂದರ್ಶನದಲ್ಲಿ ಕಾರ್ತಿ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು. ಇವಿಎಂಗಳ ಬಳಕೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ. ಪಕ್ಷದ ನೀತಿಗಳ ವಿರುದ್ಧವಾಗಿ ಕಾರ್ತಿ ಚಿದಂಬರಂ ಹೇಳಿಕೆ ನೀಡಿದ್ದು ಕಾಂಗ್ರೆಸನ್ನು ಕೆರಳಿಸಿದೆ.

ಶಿಸ್ತು ಸಮಿತಿಯ ಭಾಗವಾಗಿರುವ ಮಾಜಿ ಶಾಸಕ ಕೆ.ಆರ್.ರಾಮಸ್ವಾಮಿಯವರು ಹೊರಡಿಸಿರುವ ಶೋಕಾಸ್ ನೋಟಿಸಿನಲ್ಲಿ 10 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರಿಗೆ ಸಾಟಿಯಾಗುತ್ತಾರೆಯೇ ಎಂದು ಸಂದರ್ಶನದಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಕಾರ್ತಿ, ಬಿಜೆಪಿಯ ಪ್ರಚಾರ ಯಂತ್ರವನ್ನು ಹೊಂದಿರುವ ವ್ಯಕ್ತಿಗೆ ಯಾರೂ ಸಾಟಿಯಾಗಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದರು.

‘ರಾಹುಲ್ ಗಾಂಧಿ ಕೂಡʼ ಎಂದು ಸಂದರ್ಶಕರು ಮರುಪ್ರಶ್ನಿಸಿದಾಗ ಕಾರ್ತಿ, ‘ನನ್ನ ಮಟ್ಟಿಗೆ ಹೇಳುವುದಾದರೆ ಮೋದಿಯವರ ಪ್ರಚಾರ ವ್ಯವಸ್ಥೆ ಮತ್ತು ಪ್ರಧಾನಿಯಾಗಿ ಸಹಜವಾಗಿ ಅವರು ಪಡೆದುಕೊಳ್ಳುತ್ತಿರುವ ಜನಪ್ರಿಯತೆಯ ಮುಂದೆ ಅದೂ ಕಷ್ಟವೇ’ ಎಂದು ಉತ್ತರಿಸಿದ್ದರು.

‘ಮೋದಿಯವರ ಜನಪ್ರಿಯತೆ ಒಂದು ಅಂಶವಾಗಿದ್ದರೂ, ಅವರಿಗೆ ಸಾಟಿ ಯಾರು ಎಂದು ನೀವು ಪ್ರಶ್ನಿಸಿದರೆ ತಕ್ಷಣ ಉತ್ತರಿಸಲು ನನಗೆ ಸಾಧ್ಯವಿಲ್ಲ. ಕಾಂಗ್ರೆಸಿಗೆ ಸಂಬಂಧಿಸಿದಂತೆ ಇದೇ ಪ್ರಶ್ನೆಯನ್ನು ನೀವು ತಳಮಟ್ಟದ ಕರ್ಯಕರ್ತರಿಗೆ ಪ್ರಶ್ನಿಸಿದರೆ ಅವರು ರಾಹುಲ್ ಗಾಂಧಿ ಎಂದು ಉತ್ಸಾಹದಿಂದ ಹೇಳುತ್ತಾರೆ’ ಎಂದಿದ್ದರು.

ಏಐಸಿಸಿ ಮಾತ್ರ ಸಂಸದರಿಗೆ ನೋಟಿಸ್ ನೀಡುವ ಅಧಿಕಾರವನ್ನು ಹೊಂದಿದೆ ಎಂದು ಕಾರ್ತಿ ಚಿದಂಬರಂಗೆ ನಿಕಟವಾಗಿರುವ ಮೂಲಗಳು ಪ್ರತಿಪಾದಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News