×
Ad

ದಿಲ್ಲಿ ವಿಧಾನಸಭಾ ಚುನಾವಣೆ | ಮತದಾರರ ದತ್ತಾಂಶ ಅಪ್‌ಲೋಡ್ ಮಾಡಲು ಇಸಿ ನಿರಾಕರಣೆ:ಕೇಜ್ರಿವಾಲ್ ಆರೋಪ

Update: 2025-02-07 21:51 IST

ಅರವಿಂದ ಕೇಜ್ರಿವಾಲ್ | PTI 

ಹೊಸದಿಲ್ಲಿ : ಪದೇ ಪದೇ ವಿನಂತಿಸಿಕೊಂಡರೂ ಫಾರ್ಮ್ 17ಸಿ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಮತದಾನದ ಅಂಕಿಸಂಖ್ಯೆಗಳನ್ನು ಅಪ್‌ಲೋಡ್ ಮಾಡಲು ಚುನಾವಣಾ ಆಯೋಗ(ಇಸಿ)ವು ನಿರಾಕರಿಸಿದೆ ಎಂದು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಆರೋಪಿಸಿದ್ದಾರೆ. ದಿಲ್ಲಿ ವಿಧಾನಸಭಾ ಚುನಾವಣೆಗಳ ಮತಎಣಿಕೆ ಶನಿವಾರ ನಡೆಯಲಿದೆ.

ಆಪ್ transparentelections.in ಎಂಬ ವೆಬ್‌ಸೈಟ್‌ನ್ನು ರೂಪಿಸಿದ್ದು, ಅದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಎಲ್ಲ ಫಾರ್ಮ್ 17ಸಿಗಳನ್ನು ನಾವು ಅಪ್‌ಲೋಡ್ ಮಾಡಿದ್ದೇವೆ. ಈ ಫಾರ್ಮ್ ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ವಿವರಗಳನ್ನು ಒಳಗೊಂಡಿದೆ ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಕೇಜ್ರಿವಾಲ್,ಪಾರದರ್ಶಕತೆಯ ಹಿತಾಸಕ್ತಿಯಲ್ಲಿ ಈ ಕಾರ್ಯವನ್ನು ಇಸಿ ಮಾಡಬೇಕಿತ್ತು,ಆದರೆ ಹಾಗೆ ಮಾಡಲು ಅದು ನಿರಾಕರಿಸುತ್ತಿರುವುದು ದುರದೃಷ್ಟಕರವಾಗಿದೆʼ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News